ಬೆಂಗಳೂರು : ರಾಜ್ಯ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿಸುದ್ದಿ, ರಾಜ್ಯಾದ್ಯಂತ ರೈತರಿಗೆ ತರಕಾರಿ ಬೆಳೆಯಲು ನಾನಾ ತರಕಾರಿ ಬೀಜಗಳಿಗೆ ಸಹಾಯಧನವಾಗಿ ಪ್ರತಿ ಎಕೆರೆಗೆ 2 ಸಾವಿರ ರೂ. ನೀಡುವ `ತರಕಾರಿ ಬೀಜಗಳ ಕಿಟ್’ ವಿತರಣೆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅಧಿಕೃತ ಚಾಲನೆ ನೀಡಿದೆ.

ಪ್ರತಿ ಎಕೆರೆಯಲ್ಲಿ ತರಕಾರಿ ಬೆಳೆಯಲು 4 ಸಾವಿರ ರೂ. ಘಟಕ ವೆಚ್ಚವನ್ನು ಅಂದಾಜಿಸಿ, ಈ ಪೈಕಿ ಬೀಜಗಳ ವೆಚ್ಚವಾಗಿ ತೋಟಗಾರಿಕೆ ಇಲಾಖೆ ಮೂಲಕ 2 ಸಾವಿರ ರೂ. ವಿತರಣೆಗೆ ಸರ್ಕಾರ ಆದೇಶ ಹೊರಡಿಸಿದೆ. ಈ ಉದ್ದೇಶಕ್ಕೆ 15 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

ರ್ಹ ರೈತರಿಗೆ ಸುಧಾರಿತ ಬೇಸಾಯ ಕ್ರಮದಡಿ ತರಕಾರಿ ಬೆಳೆಯಲು ಗುಣಮಟ್ಟದ ತರಕಾರಿ ಬೀಜಗಳ ಕಿಟ್ ವಿತರಣೆಗೆ ಕ್ರಮ ವಹಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.