ಚಿತ್ರದುರ್ಗ :  ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು   ಪೋಲಿಸರು   ಅನಗತ್ಯವಾಗಿ ಬಂಧಿಸಿರುವುದು ಖಂಡನೀಯ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ   ಅಧ್ಯಕ್ಷ ಹೆಚ್.ಲಕ್ಷ್ಮಣ್ ತಿಳಿಸಿದ್ದಾರೆ.

ನಗರದ ಜಿಲ್ಲಾ ಕಾರ್ಯನಿರತ  ಪತ್ರಕರ್ತರ ಸಂಘದ ವತಿಯಿಂದ  ಇಂದು  ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ  ಬಂಧನ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿದರ್ಶನದ ಮೇರೆಗೆ   ರಾಜ್ಯದಾದ್ಯಂತ ನಮ್ಮ ಸಂಘಟನೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿ  ಆಗ್ರಹಿಸುವುದೇನೆಂದರೆ ಕೂಡಲೇ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ. ನರಸಿಂಹಮೂರ್ತಿ ಅವರು ಪತ್ರಕರ್ತರಾಗಿ ಹಾಗೂ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿದ್ದು ಕೊಂಡು ಬಂದವರು. ಅವರನ್ನು ಅನಗತ್ಯವಾಗಿ 20 ವರ್ಷಗಳ ಹಿಂದಿನ ಹಳೆ  ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ್ರೋಹ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿ ಬಂಧಿಸಿರುವುದು ಸಮರ್ಥನೀಯವಲ್ಲ ಎಂದು ಲಕ್ಷ್ಮಣ್ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕುಮಾರ್ ಸ್ವಾಮಿ,  ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡಗೆರೆ,ಖಜಾಂಚಿ ಮೆಘ ಗಂಗಾಧರ ನಾಯ್ಕ, ನಿರ್ದೇಶಕರುಗಳಾದ  ನಾಕೀಕೆರೆ ತಿಪ್ಪೇಸ್ವಾಮಿ, ಸಿ.ಪಿ.ಮಾರುತಿ. ಪತ್ರಕರ್ತರುಗಳಾದ  ಜಿ.ಬಿ.  ನಾಗರಾಜ್,ಓಂಕಾರ ಮೂರ್ತಿ, ಎಂ.ಎನ್.  ಅಹೋಬಳಪತಿ ನಾಕೀಕೆರೆ ತಿಪ್ಪೇಸ್ವಾಮಿ, ಜೆ.ತಿಪ್ಪೇಸ್ವಾಮಿ,  ಪುಟ್ಟಸ್ವಾಮಿ, ಗೊಂಡಬಾಳು ಬಸವರಾಜ್,   ದ್ವಾರಕನಾಥ್,ಬಿ.ಆರ್.ನಾಗೇಶ್ ಕೆ.ಎಂ.ಮುತ್ತುಸ್ವಾಮಿ,ಬಸವರಾಜ್ ಮುದೆನೂರ್,  ಕಿರಣ್ ಕುಮಾರ್,  ನೂರ್ ಅಹಮದ್, ಗಜೇಂದ್ರ,ಶೀನಿವಾಸ್, ಸುಮಿತ್ರ ಪಾಲ್,ದರ್ಶನ್,ಗೌನಹಳ್ಳಿ ಗೋವಿಂದಪ್ಪ,ರಾಜು,ಮಾಲತೇಶ್,ಅರಸ್, ಬ್ರಹ್ಮಗಿರಿ ಶ್ರೀನಿವಾಸ್, ಇನ್ನು ಮುಂತಾದವರಿದ್ದರು.