ಚಿತ್ರದುರ್ಗ:ದೇಶವು ಶೌಚಾಲಯದಂತಿರಬಾರದು, ದೇಶದೇವಾಲಯವಾಗಬೇಕು, ಅದಕ್ಕೆ ಮುಖ್ಯವಾಗಿ ಸ್ವಚ್ಛತೆಯ ಅರಿವು ಮತ್ತು ಜಾಗೃತಿ ಬೇಕು. ಸಾರ್ವತ್ರಿಕವಾಗಿ ಈ ಕಾರ್‍ಯ ಮಾಡಿದರೆ ಸ್ವಚ್ಛಭಾರತ ಸಾದ್ಯ ಎಂದು ಹೇಳಿದರು.
ಶರಣ ಸಂಸ್ಕೃತಿಉತ್ಸವದ ಅಂಗವಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಸ್ವಚ್ಛತಾಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಎಲ್ಲಿ ಕಸವಿರುತ್ತದೆಯೋಅಲ್ಲಿ ಕಾಯಿಲೆ ಬರುತ್ತದೆ. ಆದ್ದರಿಂದ ಸ್ವಚ್ಛತೆ ಮುಖ್ಯ,ಅದು ನಿರಂತರ ಪ್ರಕ್ರಿಯೆಯಾಗಿರಬೇಕು, ಜಾಗೃತಿ ನಿರಂತರವಿರಬೇಕು. ಶುದ್ದ ಬದುಕಿಗೆ ಬಹಿರಂಗದ ಶುದ್ದಿಯಿಂದ ಅಂತಃರಂಗದ ಶುದ್ದಿ ಸಾಧ್ಯವಾಗುತ್ತದೆ ಎಂದರು.

ಚಿತ್ರದುರ್ಗದ ಶ್ರೀ.ಕೃಷ್ಣ ಯಾದವಗುರುಪೀಠದ ಶ್ರೀ.ಬಸವ ಯಾದವಾನಂದಸ್ವಾಮಿಗಳು ಹೆಬ್ಬಾಳು ಶ್ರೀ ರುದ್ರೇಶ್ವರ ವಿರಕ್ತಮಠದ ಶ್ರೀ.ಮ.ನಿ.ಪ್ರ.ಮಹಾಂತರುದ್ರೇಶ್ವರ ಸ್ವಾಮಿಗಳು ಮಾತನಾಡಿ, ಇದೇ ಸಂಧರ್ಭದಲ್ಲಿಜಿಲ್ಲಾ ಶಸ್ತ್ರಚಿಕಿತ್ಸಕರಾದಡಾ.ಎನ್.ಜಯಪ್ರಕಾಶ್ ಈ ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಬೋದಿಸಿದರು.

ಈ ಸಂಧರ್ಭದಲ್ಲಿ ಹರಗುರುಚರಮೂರ್ತಿಗಳು, ಜಿಲ್ಲಾ ವಕೀಲರ ಸಂಘದಅಧ್ಯಕ್ಷಎನ್.ಬಿ.ವಿಶ್ವನಾಥ್, ತಾಲ್ಲೋಕು ವೈದ್ಯಾಧಿಕಾರಿಡಾ.ಪಾಲಾಕ್ಷ, ಶರಣ ಸಂಸ್ಕೃತಿಉತ್ಸವ ಸಮಿತಿಕಾರ್‍ಯಾಧ್ಯಕ್ಷ ಪಟೇಲ್ ಶಿವಕುಮಾರ್, ಕಾರ್‍ಯದರ್ಶಿ ಡಿ.ಎಸ್.ಮಲ್ಲಿಕಾರ್ಜುನ್, ಎಸ್.ಜೆ.ಎಮ್.ವಿದ್ಯಾಪೀಠದ ಕಾರ್‍ಯದರ್ಶಿ ಎ.ಜೆ.ಪರಮಶಿವಯ್ಯ ಉಪಸ್ಥಿತರಿದ್ದರು.