ಚಿತ್ರದುರ್ಗ: ಇಂದು ದೇಶದ ಅಭಿವೃದ್ದಿಯಲ್ಲಿ ಮಹತ್ತರ ಪಾತ್ರವಹಿಸುತ್ತಿರುವ ಮಹಿಳೆಯರಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪ್ರಜ್ಷೆ ಬೆಳೆಯಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯಬಸವರಾಜನ್ ಹೇಳಿದರು.
ಹೋಟೆಲ್ ಅಮೋಘ ಸಭಾಂಗಣದಲ್ಲಿ ಚಿತ್ರದುರ್ಗ ಜಿಲ್ಲಾ ಯತ್ನಿಕ್ ಬ್ಯೂಟಿ ಅಸೋಷಿಯೇಷನ್ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಇದು ಆಧುನಿಕ ಜಗತ್ತು. ಸಮಾಜ ಬದಲಾದಂತೆ ಮನುಷ್ಯನ ಜೀವನ ಶೈಲಿಯೂ ಬದಲಾಗುತ್ತಿದೆ. ಮನುಷ್ಯ ಸೌಂಧರ್ಯದ ಕಡೆಗೆ ಹೆಚ್ಚು ಗಮನ ನೀಡುವ ಕಾಲ ಇದಾಗಿದೆ. ಮಹಿಳೆಯರು ತುಂಬಾ ಸಂಖ್ಯೆಯಲ್ಲಿ ಸ್ವಯಂ ಉದ್ಯೋಗ ಅವಲಂಬಿಸಿದ್ದಾರೆ. ಬ್ಯೂಟಿ ಪಾರ್ಲರ್, ಟೈಲರಿಂಗ್‌ಗಳಂತಹ ಉದ್ಯೋಗದಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳುತ್ತಿದ್ದಾರೆಂದರು.

ಮಹಿಳೆಯರು ಆರ್ಥಿಕ ರಂಗದಲ್ಲೂ ತೊಡಗಿಸಿಕೊಳ್ಳುವುದರ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ ಸಮಾಜದಲ್ಲಿ ಸೃಷ್ಟಿಯಾಗುತ್ತಿದೆ. ಸ್ವಸಹಾಯ ಸಂಘಟನೆಗಳು ಜಾರಿಗೆ ಬಂದ ಬಳಿಕ ಮಹಿಳೆಯರಲ್ಲಿ ಸಾಕಷ್ಟು ಜಾಗೃತಿ ಮೂಡುತ್ತಿದೆ. ಆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ಸಹ ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು
ಇತ್ತೀಚಿನ ದಿನಗಳಲ್ಲಿ ನಾವು ಆರೊಗ್ಯದ ಕಡೆಗೆ ಹೆಚ್ಚು ಒತ್ತುಕೊಡುವ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದೆ. ನಮ್ಮ ಸುತ್ತಮುತ್ತಲಿನ ಪರಿಸರ ಮಲೀನಗೊಂಡು ನಾನಾ ನಮೂನೆಯ ಖಾಯಿಲೆಗಳು ಬರುತ್ತಿದೆ. ಇದರಿಂದ ಪರಸರವನ್ನು ಕಾಪಾಡಿಕೊಳ್ಳಬೇಕು. ಪ್ರತಿಮನೆಯಲ್ಲಿಯೂ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಬೇಕೆಂದು ಹೇಳಿದರು

ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಟಿ.ಕೆ.ಮಂಜುನಾಥ್, ದೇವರಾಜ ಅರಸ್ ಹಿಂದುಳಿದ ಅಭಿವೃದ್ದಿ ನಿಗಮದ ಅಧಿಕಾರಿ ರಂಗನಾಥ್, ಬಾಲಾಜಿ ಬ್ಯಾಂಗಲ್ ಸ್ಟೋರ್‌ನ ವೆಂಕಟೇಶ್, ತಿರುಮಲ ಬ್ಯಾಂಗಲ್‌ಸ್ಟೋರ್‌ನ ರಮೇಶ್, ಜಿಲ್ಲಾ ಯತ್ನಿಕ್ ಬ್ಯೂಟಿ ಅಸೋಷಿಯೇಷನ್ ಅಧ್ಯಕ್ಷೆ ವೀಣಾರಾವ್, ಕಾರ್ಯದರ್ಶಿ ಸರಸ್ವತಿ ಎಸ್, ನಿರ್ದೇಶಕರಾದ ಜ್ಯೋತಿ, ಮಂಜುನಾಥ್, ಸೌಮ್ಯ, ಲತಾ, ವೀಣಾ ಇನ್ನಿತರರು ಉಪಸ್ಥಿತರಿದ್ದರು