ದಾವಣಗೆರೆ: ದಾವಣಗೆರೆ ಗ್ರೀನ್ ಝೋನ್ ನಲ್ಲಿತ್ತು.ಆದರೆ  ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆರಂಭದಲ್ಲಿ ಇಬ್ಬರು ಸೋಂಕಿತರು ಪತ್ತೆಯಾದ ಬಳಿಕ ದಾವಣಗೆರೆಯಲ್ಲಿ 28 ದಿನಗಳ ಕಾಲ ಯಾವುದೇ ಕೊರೋನಾ ಪಾಸಿಟಿವ್ ದೃಢಪಡದ ಕಾರಣ ಹಸಿರು ವಲಯಕ್ಕೆ ಸೇರಿತ್ತು.

ಈಗ ದಾವಣಗೆರೆಯಲ್ಲಿ ಒಮ್ಮೆಲೆ ಕೊರೋನಾ ಸ್ಪೋಟವಾಗಿದೆ. ಸೋಂಕಿತರ ದಿಢೀರ್ ಏರಿಕೆಯಾಗಿ 52 ಕ್ಕೆ ಏರಿಕೆಯಾಗಿದ್ದು ಇಬ್ಬರು ಮೃತಪಟ್ಟಿದ್ದಾರೆ. ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.

ರಾಜ್ಯಾದ್ಯಂತ ಮದ್ಯಮಾರಾಟ ಆರಂಭವಾಗಿದ್ದರೂ ದಾವಣಗೆರೆಯಲ್ಲಿ 14 ದಿನಗಳ ಕಾಲ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಕೃಷಿ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದ್ದು ದಾವಣಗೆರೆ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅಲ್ಲದೆ ಲಾಕ್ ಡೌನ್ ಸಡಿಲಗೊಳಿಸಿ ನೀಡಲಾಗಿದ್ದ ವಿನಾಯಿತಿಗಳನ್ನು ತಡೆಹಿಡಿಯಲಾಗಿದೆ.