ಚಿತ್ರದುರ್ಗ: ದಸರಾ ಹಬ್ಬದ ಶರನ್ನವರಾತ್ರಿ ಪೂಜೆ ಅಂಗವಾಗಿ ರಂಗಯ್ಯನಬಾಗಿಲು ಸಮೀಪ ಉಜ್ಜನಿಮಠದ ಹತ್ತಿರವಿರುವ ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಬಗೆ ಬಗೆಯೂ ಹೂವಿನ ಹಾರ ಹಾಗೂ ಬೆಳ್ಳಿಯ ಆಭರಣಗಳಿಂದ ತಿಪ್ಪಿನಘಟ್ಟಮ್ಮನಿಗೆ ಅಲಂಕರಿಸಿದ್ದನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.  ಪ್ರಧಾನ ಅರ್ಚಕರಾದ ಶಿವಕುಮಾರ್ ತಿಪ್ಪಿನಘಟ್ಟಮ್ಮನನ್ನು ಅಲಂಕರಿಸಿದ್ದರು.

ಚಿತ್ರದುರ್ಗ: ಶರನ್ನವರಾತ್ರಿ ಪೂಜೆಯ ಪ್ರಯುಕ್ತ ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮನಿಗೆ ಬುಧವಾರ ಶೈಲಾಪುತ್ರಿ ಅಲಂಕಾರ ಮಾಡಲಾಗಿತ್ತು.
ಮಲ್ಲಿಗೆ, ಕನಕಾಂಬರ, ಸುಗಂಧರಾಜ, ಸೇವಂತಿಗೆ, ಗುಲಾಬಿ ಹೂ ಹಾಗೂ ನಿಂಬೆಹಣ್ಣಿನ ಹಾರದಿಂದ ಕಣಿವೆಮಾರಮ್ಮನನ್ನು ಸಿಂಗರಿಸಲಾಗಿತ್ತು.
ತ್ರಿಶೂಲಧಾರಿಯಾಗಿದ್ದ ಕಣಿವೆಮಾರಮ್ಮನಿಗೆ ಜರಿ ಸೀರೆ ತೊಡಿಸಿ ವಿಶೇಷವಾಗಿ ಅಲಂಕರಿಸಿದ್ದನ್ನು ನೂರಾರು ಭಕ್ತರು ವೀಕ್ಷಿಸಿದರು.