ಚಿತ್ರದುರ್ಗ: ಕಳೆದ ಇಪ್ಪತ್ತು ವರ್ಷಗಳಿಂದಲೂ ರಸ್ತೆಯನ್ನೆ ಕಂಡಿರದ ದವಳಗಿರಿ ಬಡಾವಣೆಯಲ್ಲಿ ಒಂದು ಕೋಟಿ ಇಪ್ಪತ್ತೈದು ಲಕ್ಷ ರೂ.ಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣ ಹಾಗೂ ಉದ್ಯಾನವನ ಅಭಿವೃದ್ದಿಪಡಿಸಲಾಗುವುದು ಎಂದು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಆರ್.ಕೆ.ಸರ್ದಾರ್ ಹೇಳಿದರು.

ದವಳಗಿರಿ ಬಡಾವಣೆ ಒಂದನೆ ಹಂತದಲ್ಲಿ ಟಾರ್ ರಸ್ತೆ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಆರ್.ಕೆ.ಸರ್ದಾರ್. ಹಂತ ಹಂತವಾಗಿ ದವಳಗಿರಿ ಬಡಾವಣೆಯ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು. ಕೈಯಲ್ಲಿ ಅಧಿಕಾರ ಇದ್ದಾಗ ಮಾತ್ರ ಏನಾದರೂ ಅಭಿವೃದ್ದಿ ಕೆಲಸಗಳನ್ನು ಮಾಡಲು ಸಾಧ್ಯ. ಅದಕ್ಕಾಗಿ ಈ ಬಾರಿಯ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪ್ರಬಲ ಸ್ಪರ್ಧಾಕಾಂಕ್ಷಿಯಾಗಿದ್ದು, ನೀವುಗಳು ನನ್ನನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಸದಾ ಸಿದ್ದ. ಚಿತ್ರದುರ್ಗವನ್ನು ಸುಂದರ ನಗರವನ್ನಾಗಿ ಮಾಡುತ್ತೇನೆ ಎಂದು ವಾಗ್ದಾನ ಮಾಡಿದರು.

ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರುಗಳಾದ ಬಿ.ಜಿ.ಶ್ರೀನಿವಾಸ್, ಡಿ.ಎನ್.ಮೈಲಾರಪ್ಪ, ಮೋಕ್ಷರುದ್ರಸ್ವಾಮಿ, ಲಕ್ಷ್ಮಿಕಾಂತ್, ಆಯುಕ್ತರಾದ ಎಂ.ಎಸ್. ಸೋಮಶೇಖರ್ ಸೇರಿದಂತೆ ದವಳಗಿರಿ ಬಡಾವಣೆಯ ನಿವಾಸಿಗಳು ಈ ಸಂದರ್ಭದಲ್ಲಿ ಹಾಜರಿದ್ದರು