ಚಿತ್ರದುರ್ಗ : ಶ್ರೀಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಡಾ. ಎಂ.ಎಂ. ಕಲಬುರ್ಗಿ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿಯಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ (ಪಿಹೆಚ್.ಡಿ.) ಸಹಾಯಧನ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಂ.ಎಂ. ಕಲಬುರ್ಗಿಯವರ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರಗಳಾದ ಶರಣಸಂಸ್ಕøತಿ ಮತ್ತು ವಚನ ಸಾಹಿತ್ಯ ಕುರಿತಂತೆ ಸಂಶೋಧನೆಯಲ್ಲಿ ತೊಡಗಿರುವ ಅಭ್ಯರ್ಥಿಗಳಿಗೆ ಯಾವುದಾದರೂ ಅಧಿಕೃತ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ನೊಂದಾಯಿಸಿಕೊಳ್ಳಬೇಕು. ಪ್ರತಿ ಅಭ್ಯರ್ಥಿಗೆ ವಾರ್ಷಿಕ ರೂ. 15 ಸಾವಿರದಂತೆ ನಾಲ್ಕು ಜನರಿಗೆ ಸಹಾಯ ಧನವನ್ನು ನೀಡಲಾಗುವುದು.
ಆಸಕ್ತರು ಹೆಚ್ಚಿನ ಮಾಹಿತಿಗೆ ಡಾ. ಸಿ.ಟಿ. ಜಯಣ್ಣ, ಸಂಶೋಧನಾ ನಿರ್ದೇಶಕರು, ಅಲ್ಲಮಪ್ರಭು ಸಂಶೋಧನಾ ಕೇಂದ್ರ, ಶ್ರೀ ಮುರುಘಾಮಠ, ಚಿತ್ರದುರ್ಗ – 577 502, ದೂ. 9886840737 ಇವರನ್ನು ಸಂಪರ್ಕಿಸುವುದು. ಸ್ನಾತಕೋತ್ತರ ಪದವಿ ಅಂಕಪಟ್ಟಿ ಹಾಗೂ ಸಂಬಂಧಪಟ್ಟ ದಾಖಲೆಗಳ ಜೆರಾಕ್ಸ್ ಪ್ರತಿಗಳೊಂದಿಗೆ 28-2-2108ರೊಳಗಾಗಿ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.