ತೆಲಂಗಾಣ:  ವಿಧಾನಸಭೆ ಚುನಾವಣೆಗೆ ನಿನ್ನೆಯಷ್ಟೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಈ ಮಧ್ಯೆ ಅಕ್ರಮ ಹಣ, ಮದ್ಯ ಸರಬರಾಜು ದೊಡ್ಡ ಪ್ರಮಾಣದಲ್ಲಿ ಜಾಗೃತ ದಳದ ಕೈಗೆ ಸಿಕ್ಕಿದೆ. 

ನಿನ್ನೆಯವರೆಗೆ ಚುನಾವಣಾ ಆಯೋಗದ ಲೆಕ್ಕಾಚಾರದ ಪ್ರಕಾರ 86.5 ಕೋಟಿ ರೂ. ನಗದು, ನಾಲ್ಕು ಲಕ್ಷ ಲೀಟರ್ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 119 ಕ್ಷೇತ್ರಗಳಿಗೆ ನಾಳೆ ಬೆಳಗ್ಗೆ 7ರಿಂದ ಸಂಜೆ 6 ರ ವರೆಗೆ ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಇಷ್ಟೊಂದು ಹಣ ಸಿಕ್ಕಿದ್ದು ಇದೇ ಮೊದಲು ಎಂದು ಜನರು ಮಾತನಾಡುತ್ತಿದ್ದಾರೆ.