ತುಮಕೂರು : ನಗರದಲ್ಲಿ ಇಂದಿನಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಹೇಳಿದ್ದಾರೆ.

ಬೆಳಗ್ಗೆ 10ರಿಂದ ಸಂಜೆ 7ರವರೆಗೆ ವೈನ್ ಶಾಪ್ ಓಪನ್ ಇರಲಿವೆ. ಉಳಿದಂತೆ ನಿತ್ಯ ವಸ್ತುಗಳ ಮಾರಾಟ ಮಳಿಗೆಗಳ ಜೊತೆಗೆ ಸಲೂನ್, ಪಾರ್ಲರ್ ಗಳನ್ನೂ ಕೂಡ ತೆರೆಯಬಹುದು. ಆದರೆ ಆಟೋ ಮತ್ತು ನಗರ ಸಾರಿಗೆ ಸಂಚಾರಕ್ಕೆ ಮೇ 17ರವರೆಗೂ ಕೂಡ ನಿರ್ಬಂಧ ಮುಂದುವರಿದಿರಲಿದೆ ಎಂದು ಸ್ಪಷ್ಟನೆ ನೀಡಿದರು.