ಚಿತ್ರದುರ್ಗ: ಕಳೆದ ಎರಡು ತಿಂಗಳಿಂದ ಐತಿಹಾಸಿಕ ತಿಮ್ಮಣ್ಣನಾಯಕ ಕೆರೆಗೆ ನೀರು ಬರುವಂತೆ ಮಾಡಲು ಅಂಜಿನಪ್ಪ ಮತ್ತು ಗೆಳಯರು ಸೇರಿಕೊಂಡು ತಿಮ್ಮಣ್ಣ ನಾಯಕ ಕೆರೆಯನ್ನು ಮುಳ್ಳು ಗಿಡಗಳನ್ನು ಸ್ವಚ್ಚಮಾಡಿದರು.

ನಂತರ ಮಳೆಗಾಲದಲ್ಲಿ  ನೀರು ಹರಿದು ಬರುವ ಅಡ್ಡಲಾಗಿರುವ ಜಾಗದಲ್ಲಿ ದೊಡ್ಡಣ್ಣನ ಕೆರೆ ಟ್ಯೂಬ್ ಕಲ್ಲುಗಳಿಂದ ಹಾಗು  ಮಣ್ಣಿನಿಂದ  ಮುಂಚಿಕೊಂಡು ಹೋಗಿತ್ತು,
ಕೆಳಗೊಟೆ ಯುವಕರ ಸಹಾಯದಿಂದ ಮುಳುಗಿ ಹೊರಗಿರುವ ಟ್ಯೂಬ್‌ನ್ನುಸರಿ ಮಾಡಲಾಯಿತು.
ಈ ಬಾರಿ ಮಳೆ ಬಂದ್ರೆ ತಿಮ್ಮಣ್ಣನಾಯಕ ಕೆರೆ ಕೋಡಿ ಬಿಳುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಇಂತಹ ಸಾಹಸಕ್ಕೆ ಕೈ ಹಾಕಿದವರು ವೀರಭದ್ರ ,ರವಿ ರೇವಣ್ಣ ಪದ್ಮಣ್ಣ ಗೋವಿಂದ ನಾಗೇದ್ರಪ್ಪ ಪ್ರಕಶ್ ರಾಜು ನಾಗಭೂಷಣ ಮಂಜು ಇತರರು ಹಾಗೂ ಕೆಳಗೋಟೆ ಯುವಕರು. !