ಚಿತ್ರದುರ್ಗ:  ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ತಳುಕಿನಲ್ಲಿ ಸೆಪ್ಟೆಂಬರ್ 07 ರಂದು 42.8 ಮಿ.ಮೀ ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ.

ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಪರಶುರಾಂಪುರ 9.2 ಮಿ.ಮೀ, ನಾಯಕನಹಟ್ಟಿ 6.8. ಮೊಳಕಾಲ್ಮರು ತಾಲ್ಲೂಕು ವ್ಯಾಪ್ತಿಯ ಮೊಳಕಾಲ್ಮುರು 4.2, ರಾಯಾಪುರ 1.2 , ಬಿಜಿ ಕೆರೆ 23.8. ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ತಾಳ್ಯ 5.4. ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 14.2, ಬಬ್ಬೂರು 3.6, ಈಶ್ವರಗೆರೆ 2.2. ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-01 ರಲ್ಲಿ 20.2, ಚಿತ್ರದುರ್ಗ-02 ರಲ್ಲಿ 6, ಹಿರೇಗುಟನೂರು 4.1, ಭರಮಸಾಗರ 3, ಸಿರಿಗೆರೆ 2.8. ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗ 1.6, ಮಾಡದಕೆರೆಯಲ್ಲಿ 2.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.