ಬೆಂಗಳೂರು: 15 ವರ್ಷಕ್ಕಿಂತ ಯಾವುದೇ ಹಳೆಯ ಬಸ್ ಗಳ ಸಂಚಾರಕ್ಕೆ ಪರವಾನಿಗೆ ನೀಡಲೇಬಾರದು ಎಂದು ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ನೀಡಿದೆ.

ಕೆಲ ದಿನಗಳ ಹಿಂದೆ ಮಂಡ್ಯದಲ್ಲಿ ನಡೆದ ಭೀಕರ ಬಸ್ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆ ಹೊಸ ನಿರ್ಣಯ ತೆಗೆದುಕೊಂಡಿದೆ. 15 ವರ್ಷಕ್ಕಿಂತ ಹಳೆಯ ಬಸ್ ಗಳ ಸಂಚಾರಕ್ಕೆ ಪರವಾನಿಗೆ ನೀಡಲೇಬಾರದು ಎಂದು ಸಾರಿಗೆ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ನೀಡಿದೆ.

ಹಳೆ ಪರವಾನಿಗೆಯಲ್ಲಿಯೇ ಹೊಸ ವಾಹನ ನಡೆಸಬೇಕೆಂದು ಕೆಲ ಜಿಲ್ಲೆಗಳಲ್ಲಿ ಸೂಚಿಸಿದೆ. ಈ ಆದೇಶ ಉಲ್ಲಂಘಿಸಿದವರ ಪರವಾನಿಗೆ ರದ್ದುಪಡಿಸಲಾಗುವುದು. ಸರ್ಕಾರ ಇದಕ್ಕೆ ಅನುಮತಿಸಿದರೆ ರಾಜ್ಯದೆಲ್ಲೆಡೆ ಈ ನಿಯಮ ಬರಲಿದೆ.