ಚಿತ್ರದುರ್ಗ:ಜಿಲ್ಲಾ ಆಡಳಿತದಿಂದ ಹಜರತ್‍ಟಿಪ್ಪು ಸುಲ್ತಾನ್‍ಜಯಂತಿಯನ್ನು ನವಂಬರ್ 10 ರಂದು ಮೆರವಣಿಗೆಇಲ್ಲದೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರದಆದೇಶದಂತೆ ಮೆರವಣಿಗೆಇಲ್ಲದೆ ವೇದಿಕೆ ಕಾರ್ಯಕ್ರಮವನ್ನು ಮಾತ್ರ ಮಾಡಲಾಗುತ್ತಿದೆ.ಚಿತ್ರದುರ್ಗದಲ್ಲಿ ತ.ರಾ.ಸು.ರಂಗಮಂದಿರದಲ್ಲಿ ನ.10 ರ ಬೆಳಗ್ಗೆ 11 ಗಂಟೆಗೆಜಯಂತಿಯನ್ನುಆಚರಣೆ ಮಾಡಲಾಗುತ್ತಿದೆಎಂದರು.
ಕೆಲವು ಸಂಘಟನೆಗಳು ಟಿಪ್ಪುಜಯಂತಿಯನ್ನುಆಚರಣೆ ಮಾಡಬಾರದುಎಂದು ಬೇಡಿಕೆಯನ್ನು ಸಲ್ಲಿಸಿದ್ದು ಮುಂಜಾಗ್ರತಾಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.ನವಂಬರ್ 9 ರ ಬೆಳಗ್ಗೆ 6 ಗಂಟೆಯಿಂದ ನ.10 ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆಜಾರಿಯಲ್ಲಿದ್ದು ಈ ಅವಧಿಯಲ್ಲಿ ಮದ್ಯದ ಅಂಗಡಿಗಳನ್ನು ಮುಚ್ಚಲು ಹಾಗೂ ಮಾರಾಟವನ್ನು ಸಹ ನಿಷೇಧಿಸಲಾಗಿದೆಎಂದರು.
ಕೆಲವು ಮದ್ಯದಅಂಗಡಿಯವರು ನಿಷೇಧಾಜ್ಞೆಇದ್ದಾಗಲೂ ಮಾರಾಟ ಮಾಡಿದಲ್ಲಿ ಪೊಲೀಸ್ ಮತ್ತುಅಬಕಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ.ಆದರೆ ನಿಷೇಧಾಜ್ಞೆಯು ಮದುವೆ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಇದು ಅನ್ವಯವಾಗುವುದಿಲ್ಲ.