ಚಿತ್ರದುರ್ಗ: ಇಲ್ಲಿನ ರಾಜ ಬೀದಿಗಳಲ್ಲಿ ಜ. 14 ರಂದು ಬೆಳಿಗ್ಗೆ 9 ಕ್ಕೆ ಅಯ್ಯಪ್ಪಸ್ವಾಮಿಯ ಆಭರಣದ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ತಿಳಿಸಿದೆ.

ಮೆದೇಹಳ್ಳಿ ರಸ್ತೆಯಲ್ಲಿ ಇರುವ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ ನಿಂದ ಜ. 14 ರಂದು ಸಂಜೆ 5 ಕ್ಕೆ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ 18 ನೇ ವರ್ಷದ ದೀಪೋತ್ಸವ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ.

ಸೇವಾ ಟ್ರಸ್ಟ್ ನ ಅಧ್ಯಕ್ಷ ಶರಣ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಶಾಸಕ ಜಿ.ಎಚ್.‌. ತಿಪ್ಪಾರೆಡ್ಡಿ ಉದ್ಘಾಟಿಸುವರು. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸುವರು.

ದಿ ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ನ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ಮೆದೇಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆರ್.ವಿಜಯ್ ಕುಮಾರ್, ಮಾತಾ ಆಯಿಲ್ ಇಂಡಸ್ಟ್ರೀಸ್ ಟಿ.ಮಹಂತೇಶ್, ದ್ಯಾಮಲಾಂಬ ಟ್ರೇಡಿಂಗ್ ಕಂಪನಿಯ ದ್ಯಾಮಣ್ಣ, ಐಶ್ವರ್ಯ ಗ್ರೂಪ್ ಆಫ್ ಹೋಟೆಲ್ಸ್ ಅರುಣ್ ಕುಮಾರ್, ವಿ.ಜಿ.ಎಸ್.ನ ಬಿ.ಎಸ್.ವಿರುಪಾಕ್ಷಪ್ಪ, ಬೀರಲಿಂಗೇಶ್ವರ ಟ್ರೇಡಿಂಗ್ ಕಂಪನಿಯ ಕೆ.ಎನ್.ಸಕ್ರಪ್ಪ, ಆರ್ಯ ವೈಶ್ಯ ಸಂಘದ ಮಾಜಿ ಅಧ್ಯಕ್ಷ ಎಚ್.ಕೊಟ್ರೇಶ್ ಶೆಟ್ಟಿ, ಹರಿ ಹ್ಯಾಂಡ್ ಲೂಮ್ಸ್‍್ ನ ಬಾಬುಲಾಲ್ ನಾಗರ್ ಅತಿಥಿಗಳಾಗಿ ಭಾಗವಹಿಸುವರು ಎಂದು ಸೇವಾ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.