ಚಿತ್ರದುರ್ಗ: ಚಿನ್ಮೂಲಾದ್ರಿ ಅಡ್ವೆಚರ್ಸ್ ಕ್ಲಬ್ ವತಿಯಿಂದ ಸುಮಾರು 20ವರ್ಷಗಳಿಂದ ಜೋಗಿಮಟ್ಟಿ ಗಿರಿಧಾಮಗಳಲ್ಲಿ ಬೇಸಿಗೆ ದೃಷ್ಠಿಯಿಂದ ಪ್ರಾಣಿ ಪಕ್ಷಿಗಳಿಗೆ ನೀರಿನ ಅನುಕೂಲವಾಗಲೆಂದು 20ಅಡಿ ಉದ್ದ 8ಅಡಿ ಅಗಲದಷ್ಟು ಸುಮಾರು 20 ದೋಣಿಗಳಲ್ಲಿ ಊಳೆತ್ತುವ ಕೆಲಸ.

ಸಾವಿರಾರು ಅಡಿ ಆಳದಲ್ಲಿ ಬೋರ್‍ವೆಲ್ ಕೊರೆಸಿದರು ನೀರು ಬರೋದು ಕಷ್ಟವಿದ್ದರೂ ಸಹ ಸುಮಾರು 3-4 ಅಡಿ ಆಳದಷ್ಟು ಊಳೆತ್ತಿದರೆ ಸಾಕು ನೀರು ಬರುತ್ತಿರುವುದು ಆಶ್ಚರ್ಯವಾಯಿತು. ಈ ಘಟನೆಗೆ ಸಂತೋಷವನ್ನು ಸಹ ಸಂಭ್ರಮಿಸಿದೆವು. ಈಗೆ ಇನ್ನು ಸುಮಾರು 12 ದೋಣಿಗಳನ್ನು ಊಳೆತ್ತುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. ಹಾಗೂ ಈ ಕಾರ್ಯಕ್ರಮಕ್ಕೆ ಆಸಕ್ತರು ಬಂಧು ಕೈಜೋಡಿಸಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಹುಲಿಯಪ್ಪ, ಪ್ರಕಾಶ್‍ರೆಡ್ಡಿ, ಯಶಸ್ವಿನಿ, ಬಸವರಾಜ ಗೋಡ ಪಾಟೀಲ್, ಜೀಸ್ಮಬಾನು, ನಾಗಭೂಷಣ್, ಕವಿತ ಇನ್ನು ಇತರರು ಉಪಸ್ಥಿತರಿದ್ದರು.