ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ ಮತ್ತೆ 687 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 524 ಕ್ಕೆ ಏರಿಕೆಯಾದಂತಾಗಿದೆ.

ಜಿಲ್ಲೆಯಲ್ಲಿ ಮಂಗಳವಾರ ಚಿತ್ರದುರ್ಗ ತಾಲ್ಲೂಕಿನಲ್ಲಿ 05 ಪುರುಷರು, 04 ಮಹಿಳೆಯರು ಸೇರಿದಂತೆ ಒಟ್ಟು 09 ಜನರಿಗೆ ಕೋವಿಡ್ ದೃಢಪಟ್ಟಿದೆ.  ಹಿರಿಯೂರು ತಾಲ್ಲೂಕಿನಲ್ಲಿ 08 ಪುರುಷರು, 08 ಮಹಿಳೆಯರು, ಒಟ್ಟು-16.  ಚಳ್ಳಕೆರೆ ತಾಲ್ಲೂಕಿನಲ್ಲಿ 06 ಪುರುಷರು, 03 ಮಹಿಳೆಯರು, ಒಟ್ಟು-09.  ಹೊಸದುರ್ಗ ತಾಲ್ಲೂಕಿನಲ್ಲಿ 06 ಪುರುಷರು, 02 ಮಹಿಳೆಯರು, ಒಟ್ಟು 08.  ಮೊಳಕಾಲ್ಮೂರು ತಾಲ್ಲೂಕಿನಲ್ಲಿ 12 ಪುರುಷರು, 07 ಮಹಿಳೆಯರು, ಒಟ್ಟು-19.  ಹೊಳಲ್ಕೆರೆ ತಾಲ್ಲೂಕಿನಲ್ಲಿ 04 ಪುರುಷರು, 02 ಮಹಿಳೆಯರು ಸೇರಿದಂತೆ ಒಟ್ಟು 06 ಜನರಿಗೆ ಕೋವಿಡ್ ದೃಢಪಟ್ಟಿದೆ