ಚಿತ್ರದುರ್ಗ : ಕೋವಿಡ್-19 ವೈರಸ್ ಸೋಂಕು ನಿರ್ಮೂಲನೆಗಾಗಿ ಅನ್ಯ ಜಿಲ್ಲೆಗಳ ಸಾರ್ವಜನಿಕರು ಹಾಗೂ ವಾಹನಗಳ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಿದ್ದು, ಈ ದಿಸೆಯಲ್ಲಿ ಜಿಲ್ಲಾಡಳಿತ ಜಿಲ್ಲೆಯ ಪ್ರಮುಖ ರಸ್ತೆ, ಹೆದ್ದಾರಿಗಳಲ್ಲಿ ಒಟ್ಟು 18 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಿ, ಕಟ್ಟುನಿಟ್ಟಿನ ನಿಗಾ ವಹಿಸಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ತಿಳಿಸಿದ್ದಾರೆ.

ಚಳ್ಳಕೆರೆ ತಾಲ್ಲೂಕಿನಲ್ಲಿ  ಟಿ. ಕೋಟೆ, ಹಿರೇಹಳ್ಳಿ, ಪಾತಪ್ಪನಗುಡಿ, ನಾಗಪ್ಪನಹಳ್ಳಿ ಗೇಟ್, ಮಲ್ಲಸಮುದ್ರ, ದೊಡ್ಡಚೆಲ್ಲೂರು, ತೊರೆ ಕೋಲಮ್ಮನಹಳ್ಳಿ.  ಚಿತ್ರದುರ್ಗ ತಾಲ್ಲೂಕಿನಲ್ಲಿ ರಾ.ಹೆ. 13 ರಲ್ಲಿ ಬೊಗಳೇರಹಟ್ಟಿ, ಹಾಗೂ ರಾ.ಹೆ. 4 ರಲ್ಲಿ ಎಮ್ಮೆಹಟ್ಟಿ ಭರಮಸಾಗರ.  ಹಿರಿಯೂರು ತಾಲ್ಲೂಕಿನಲ್ಲಿ ಜೆ.ಜಿ. ಹಳ್ಳಿ ಹಾಗೂ ಪಿ.ಡಿ. ಕೋಟೆ.  ಹೊಳಲ್ಕೆರೆ ತಾಲ್ಲೂಕಿನಲ್ಲಿ ಕಣಿವೆಹಳ್ಳಿ, ದುಮ್ಮಿ ಹಾಗೂ ಅಂದನೂರು.  ಹೊಸದುರ್ಗ ತಾಲ್ಲೂಕಿನಲ್ಲಿ ಗಡಿ ಅಹ್ಮದ್‍ನಗರ ಹಾಗೂ ಹೆಗ್ಗೆರೆ.  ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಎದ್ದಲ ಬೊಮ್ಮಯ್ಯನಹಟ್ಟಿ ಹಾಗೂ ತಮ್ಮೇನಹಳ್ಳಿ.

ಪ್ರತಿ ಚೆಕ್‍ಪೋಸ್ಟ್‍ಗೆ ತಾಲ್ಲೂಕು ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ, ಪೊಲೀಸ್ ಕಾನ್ಸ್‍ಟೇಬಲ್ ಹಾಗೂ ಇತರೆ ಇಲಾಖೆ ಸಿಬ್ಬಂದಿ ಸೇರಿದಂತೆ ತಂಡ ರಚಿಸಲಾಗಿದೆ.  ಪ್ರತಿ ಚೆಕ್‍ಪೋಸ್ಟ್‍ಗೆ ಒಟ್ಟು 03 ತಂಡಗಳಿದ್ದು, ಪ್ರತಿ ತಂಡವೂ 8 ಗಂಟೆಗಳ ಕಾಲ ಸರದಿಯಂತೆ ಕಾರ್ಯ ನಿರ್ವಹಿಸಬೇಕು.  ಚೆಕ್‍ಪೋಸ್ಟ್‍ಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ.  ಈ ತಂಡದ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪ್ರತಿಯೊಂದು ವಾಹನ ಮತ್ತು ವ್ಯಕ್ತಿಗಳ ತಪಾಸಣೆ ನಡೆಸಬೇಕು.  ಅನಗತ್ಯ ವ್ಯಕ್ತಿ ಹಾಗೂ ವಾಹನಗಳನ್ನು ಕಡ್ಡಾಯವಾಗಿ ತಡೆಯಬೇಕು.  ತುರ್ತು ಮತ್ತು ಅಗತ್ಯ ಸೇವೆಯ ವಾಹನಗಳಿಗೆ ಓಡಾಡಲು ಅವಕಾಶ ನೀಡಬೇಕು.  ಬೇರೆ ಜಿಲ್ಲೆಯಿಂದ ಯಾವುದೇ ವ್ಯಕ್ತಿ ಬಂದಲ್ಲಿ ಹೌಸ್ ಕ್ವಾರಂಟೈನ್‍ನಲ್ಲಿ