ಚಿತ್ರದುರ್ಗ: ಕೊರೋನಾ ವೈರಸ್ (ಕೋವಿಡ್-19) ಸಾಂಕ್ರಮಿಕ ರೋಗ ತಡೆ ಹಾಗೂ ನಿಯಂತ್ರಣಕ್ಕಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಲಾಕ್‍ಡೌನ್ ಆದೇಶ ಹೊರಡಿಸಲಾಗಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸಬೇಕಾಗಿದ್ದು, ಜಿಲ್ಲಾಡಳಿತದಿಂದ “ವಾರ್  ರೂಂ” ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.

ಜಿಲ್ಲೆಯ ಸಾರ್ವಜನಿಕರಿಗೆ ಅವಶ್ಯಕವಾದ ವೈದ್ಯಕೀಯ ಸೇವೆ, ಆಹಾರ ಪದಾರ್ಥ, ತರಕಾರಿ, ವಾಹನ ಸೌಲಭ್ಯ, ಇನ್ನೀತರ ಸೇವೆಗಳಿಗಾಗಿ ಹಾಗೂ ನಿರ್ಗತಿಕರಿಗೆ, ಅಲೆಮಾರಿಗಳಿಗೆ, ವಲಸಿಗರಿಗೆ, ನಿರಾಶ್ರಿತರಿಗೆ ಆಹಾರದ ಅವಶ್ಯಕತೆ ಇದ್ದಲ್ಲಿ ವಾರ್ ರೂಂನ 08194-222027, 08194-222035, 08194-222038, 08194-222044, 08194-222050, 08194-222056 ಈ ನಂಬರ್‍ಗಳಿಗೆ ಕರೆ ಮಾಡಿ ಸಾರ್ವಜನಿಕರು ಸಹಾಯ ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.