ಚಿತ್ರದುರ್ಗ: ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಚುನಾವಣೆಗೆ ಸಂಬಂಧಿಸಿದ ದೂರು ಹಾಗೂ ಮಾಹಿತಿಗಾಗಿ ದಿನದ 24 ಗಂಟೆಯು ಕಾರ್ಯನಿರ್ವಹಿಸಲು ನಿಯಂತ್ರಣಾ ಕೊಠಡಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ಮುಕ್ತ, ನ್ಯಾಯ ಸಮ್ಮತ, ಪಾರದರ್ಶಕ ಹಾಗೂ ಶಾಂತಯುತ ಚುನಾವಣೆ ನಡೆಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ, ಮತದಾರರಿಗೆ ವಸ್ತುಗಳ ಆಮಿಷ, ಮದ್ಯ, ಹಣ ಹಂಚಿಕೆ, ಬೆದರಿಕೆ ಒಡ್ಡುವುದು ಸೇರಿದಂತೆ ಇನ್ನಿತರೆ ಯಾವುದೇ ದೂರುಗಳನ್ನು ನೀಡಬಹುದಾಗಿದೆ. ಮತ್ತು ಚುನಾವಣೆಗೆ ಸಂಬಂಧಿಸಿದಂತೆ ಸಹಾಯ ಹಾಗೂ ಮಾಹಿತಿಗಾಗಿಯು ಕರೆ ಮಾಡಬಹುದಾಗಿದೆ.
ಟೋಲ್ ಫ್ರೀ ಸಂಖ್ಯೆ 1077 ಆಗಿದ್ದು ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದಂತೆ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದಂತೆ ದೂರು ನೀಡಲು ಕರೆ ಮಾಡಬಹುದಾಗಿದೆ. ಹಾಗೂ ನಿಯಂತ್ರಣ ಕೊಠಡಿಯ ಇನ್ನಿತರೆ ಸಹಾಯವಾಣಿ 08194-224220, 224228, 224255, 224265, 224266 ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ.

ನಿಯಂತ್ರಣ ಕೊಠಡಿಯು ವಾರ್ತಾ ಭವನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ದಿನದ 24 ಗಂಟೆಯು ಸಿಬ್ಬಂದಿಗಳು ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮತ್ತು ದೂರು ಕೇಂದ್ರಕ್ಕೆ ನಿರ್ವಹಣೆಗಾಗಿ ಭೂ ಮಾಪನ ಇಲಾಖೆ ಉಪನಿರ್ದೇಶಕರು ಹಾಗೂ ತಾಂತ್ರಿಕ ಸಹಾಯಕರಾದ ಪ್ರಕಾಶ್ ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಇವರ ಮೊಬೈಲ್ ಸಂಖ್ಯೆ 9448832557 ಆಗಿರುತ್ತದೆ.