ಪರಮಪೂಜ್ಯರಾದ ತಾವುಗಳು ಮೂರ್ನಾಲ್ಕು ದಶಕಗಳಿಂದಲೂ ತಮ್ಮದೇ ಆದ ವಿಶಿಷ್ಠ ಜನಪರ ಚಿಂತನೆಗಳ ಮೂಲಕ ಜನಸಾಮಾನ್ಯರ ಕಷ್ಟಗಳಿಗೆ ಸೂಕ್ತ ಪರಿಹಾರ ಮಾರ್ಗಗಳನ್ನು ಸೂಚಿಸುವ ಮೂಲಕ ಆಶೀರ್ವದಿಸಿ,ಆಯಾಯ ಸಂದರ್ಭದ ಸಂಕಷ್ಟಗಳಿಂದ ನೊಂದವರನ್ನು ಪಾರು ಮಾಡಿ ನೆಮ್ಮದಿಯ ಬದುಕಿಗೆ ಎಡೆಮಾಡಿಕೊಟ್ಟಿರುವುದನ್ನು ನಾಡಿನ ಜನರು ಎಂದಿಗೂ ಮರೆಯಲಾರರು.
ಇದರಂತೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯೇ ನಾಚುವಂತೆ ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾರರಿಗೆ ಆಮಿಷವೊಡ್ಡಿ ವಾಮಮಾರ್ಗಗಳನ್ನು ಅನುಸರಿಸಿ ಶತಾಯ ಗತಾಯ ಗೆಲುವನ್ನು ತಮ್ಮದಾಗಿಸಿಕೊಳ್ಳಲು ಬಯಸುವ ಈ ದಿನಗಳಲ್ಲಿ ಇವ್ಯಾವುದಕ್ಕೂ ಅವಕಾಶ ಕೊಡದೇ ಪಾರದರ್ಶಕವಾಗಿ ಅಮಿಷ ರಹಿತ ಚುನಾವಣೆಯತ್ತ ಪರಮಪೂಜ್ಯರಾದ ತಾವುಗಳು ಚಿಂತಿಸಿರುವುದು ಅತ್ಯಂತ ಸಂತೋಷ ಹಾಗೂ ಸ್ವಾಗತಾರ್ಹ ಬೆಳವಣಿಗೆಯಾಗಿರುತ್ತದೆ.
ಆಮಿಷರಹಿತ ಚುನಾವಣೆಯನ್ನು ಪ್ರಾಯೋಗಿಕವಾಗಿ ನೆಡೆಸಲು ಶ್ರೀಗಳವರು ಆಯ್ಕೆ ಮಾಡಿಕೊಂಡಿರುವಂತೆ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಜೊತೆಗೆ ಅಭಿವೃದ್ಧಿ ಯ ಸೋಂಕೇ ಇಲ್ಲದೆ ದಶಕಗಳಿಂದಲೂ ಸೊರಗುತ್ತಿರುವ ಜಿಲ್ಲೆಯ ಕೇಂದ್ರ ಹಾಗೂ ಸಿರಿಗೆರೆಗೆ ಅತ್ಯಂತ ಸಮೀಪವಿರುವ ನಮ್ಮ ಐತಿಹಾಸಿಕ ಚಿತ್ರದುರ್ಗ ವಿಧಾನಸಭಾ ಕ್ಷೇತ್ರವನ್ನೂ ಕೂಡಾ ಆಯ್ಕೆ ಮಾಡಿಕೊಳ್ಳುವ ಮೂಲಕ ಈ ಕ್ಷೇತ್ರಕ್ಕೆ ಹಾಗೂ ಇಲ್ಲಿಯ ಮತದಾರರಿಗೆ ಸೂಕ್ತ ಮಾರ್ಗದರ್ಶನ ಸಲಹೆ-ಸಹಕಾರಗಳ ಮೂಲಕ ನಮ್ಮೆಲ್ಲರನ್ನೂ ಆಶೀರ್ವದಿಸಿ ಚುನಾವಣಾ ಮೂಲಕವೇ ಧೂಳ್ ನಗರ ಎಂಬ ಅಪಖ್ಯಾತಿಗೊಳಗಾದ ಚಿತ್ರದುರ್ಗದಲ್ಲಿ ಹೊಸ ಅಧ್ಯಾಯ ಪ್ರಾರಂಬಿಸಲು ಆಶೀರ್ವದಿಸಬೇಕಾಗಿ ಪರಮಪೂಜ್ಯ ಸಿರಿಗೆರೆ ಶ್ರೀಗಳವರಲ್ಲಿ ಭಕ್ತಿಪೂರ್ವಕವಾಗಿ ನಮಿಸುತ್ತಾ ಪತ್ರಿಕಾ ಹೇಳಿಕೆಯ ಮೂಲಕ ಪ್ರಾರ್ಥಿಸಿಕೊಳ್ಳುತ್ತೇನೆ.

ಆರ್.ಶೇಷಣ್ಣಕುಮಾರ್.
ಎಲ್ಲೈಸಿ ನೌಕರ(ನಿ)
ಸಮಾಜಸೇವಕ.ಚಿತ್ರದುರ್ಗ.
ಫೋ.77603-79111/94481-70553.