ಚಿತ್ರದುರ್ಗ ಲೋಕಸಭೆ ಚುನಾವಣೆ: ಶೇ. 70. 59 ರಷ್ಟು ಶಾಂತಿಯುತ ಮತದಾನ
ಚಿತ್ರದುರ್ಗ : ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 08 ವಿಧಾನಸಭಾ ಕ್ಷೇತ್ರಗಳಲ್ಲಿ ಏ. 18 ರಂದು ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು ಶೇ. 70.59 ರಷ್ಟು ಶಾಂತಿಯುತ ಮತದಾನವಾಗಿದೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 73.36, ಚಳ್ಳಕೆರೆ- ಶೇ. 71.86 , ಚಿತ್ರದುರ್ಗ-ಶೇ. 68.18 , ಹಿರಿಯೂರು- ಶೇ.68.32, ಹೊಸದುರ್ಗ- ಶೇ.71.67, ಹೊಳಲ್ಕೆರೆ- ಶೇ. 72.7 ಹಾಗೂ ತುಮಕೂರು ಜಿಲ್ಲೆ ಸಿರಾ ವಿಧಾನಸಭಾ ಕ್ಷೇತ್ರದಲ್ಲಿ ಶೇ. 74.16 ಮತ್ತು ಪಾವಗಡ ಕ್ಷೇತ್ರದಲ್ಲಿ 64.48 ಶೇ. ರಷ್ಟು ಮತದಾನವಾಗಿದೆ.
ಒಟ್ಟಾರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಅತಿ ಹೆಚ್ಚಿನ ಮತದಾನ ಶೇ. 74. 16 ರಷ್ಟು ಸಿರಾ ಕ್ಷೇತ್ರದಲ್ಲಿ ದಾಖಲಾಗಿದ್ದರೆ, ಅತಿ ಕಡಿಮೆ ಪಾವಗಡ ಕ್ಷೇತ್ರದಲ್ಲಿ ಶೇ. 64.48 ರಷ್ಟು ಮತದಾನ ದಾಖಲಾಗಿದೆ.

ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡ 1952 ರಿಂದ ಇದುವರೆಗೂ ನಡೆದಿರುವ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ದಾಖಲಾಗಿರುವ ಶೇಕಡಾವಾರು ಮತದಾನ ಪ್ರಮಾಣ ವಿವರ ಇಂತಿದೆ. 1952-60.29, 1957-59.34, 1962-65.85, 1967-68.26, 1971-60.68, 1977-61.76, 1980-59.89, 1984-71.99, 1989-67.48, 1991-57.04, 1996-64.58, 1998-67.19, 1999-73.65, 2004-69.65, 2009-54.50, 2014-66.07 ಮತದಾನವಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.