ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಮೀಸಲು ಕ್ಷೇತ್ರ ಚುನಾವಣೆ ಸಂಬಂಧಿಸಿದಂತೆ ಚುನಾವಣಾ ಕಣದಲ್ಲಿ ಉಳಿದಿರುವ ಒಟ್ಟು 19 ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಂಚಿಕೆ ಮಾಡಲಾಯಿತು.

ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಚುನಾವಣಾ ಸಾಮಾನ್ಯ ವೀಕ್ಷಕರಾದ ವಿ. ಚಂದ್ರಶೇಖರನ್ ಹಾಗೂ ಅಭ್ಯರ್ಥಿಗಳ ಸಮಕ್ಷಮ ಚುನಾವಣಾ ಕಣದಲ್ಲಿ ಉಳಿದಿರುವ ಎಲ್ಲ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆ ಹಂಚಿಕೆ ಮಾಡಲಾಯಿತು.

ಅಭ್ಯರ್ಥಿ ಹೆಸರು, ಪಕ್ಷದ ಹೆಸರು, ಹಂಚಿಕೆ ಮಾಡಲಾಗಿರುವ ಚುನಾವಣಾ ಚಿಹ್ನೆ ವಿವರ ಇಂತಿದೆ. ಬಿ.ಎನ್. ಚಂದ್ರಪ್ಪ, ಕಾಂಗ್ರೆಸ್- ಕೈ. ಎ. ನಾರಾಯಣಸ್ವಾಮಿ, ಬಿಜೆಪಿ- ಕಮಲ. ಮಹಂತೇಶ್ ಸಿ.ಯು., ಬಹುಜನ ಸಮಾಜ ಪಕ್ಷ- ಆನೆ. ಅರುಣಾಚಲಂ ವೈ., ಪಿರಮಿಡ್ ಪಾರ್ಟಿ ಆಫ್ ಇಂಡಿಯಾ- ಅನಾನಸ್. ದೇವೇಂದ್ರಪ್ಪ, ಉತ್ತಮ ಪ್ರಜಾಕೀಯ ಪಾರ್ಟಿ-ಆಟೋ ರಿಕ್ಷಾ. ನಿರಂಜನ ಎ.ಡಿ. ಚೀಳಂಗಿ, ಅಂಬೇಡ್ಕರ್ ಸಮಾಜ ಪಾರ್ಟಿ- ಗಾಜಿನ ಲೋಟ. ಎಸ್. ಮೀಠ್ಯಾನಾಯ್ಕ, ಪ್ರಗತಿಶೀಲ ಸಮಾಜವಾದಿ ಪಾರ್ಟಿ (ಲೋಹಿಯ)-ಚಾವಿ. ಕುಮಾರ ವೈ., ಪಕ್ಷೇತರ- ಇಟ್ಟಿಗೆ. ಗಣೇಶ್, ಪಕ್ಷೇತರ- ದೂರವಾಣಿ. ತಿಪ್ಪೇಸ್ವಾಮಿ ಟಿ., ಪಕ್ಷೇತರ-ಹೆಲಿಕಾಪ್ಟರ್. ಸಿ.ಹೆಚ್. ನಾರಾಯಣಸ್ವಾಮಿ, ಪಕ್ಷೇತರ- ಬೆಂಡೆಕಾಯಿ. ಡಿ. ಪೆನ್ನಪ್ಪ, ಪಕ್ಷೇತರ- ದ್ರಾಕ್ಷಿ. ವಿ.ಎಸ್. ಭೂತರಾಜ, ಪಕ್ಷೇತರ- ಬ್ಯಾಟ್ಸ್ಮ್‍ನ್, ರಮೇಶ ವಿ., ಪಕ್ಷೇತರ- ಗ್ಯಾಸ್ ಸಿಲಿಂಡರ್. ಎಲ್. ರಂಗಪ್ಪ, ಪಕ್ಷೇತರ- ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ. ಲೋಕೇಶ ಎಂ.ಕೆ., ಪಕ್ಷೇತರ- ವಜ್ರ. ಎನ್.ಟಿ. ವಿಜಯಕುಮಾರ್, ಪಕ್ಷೇತರ- ಟಿಲ್ಲರ್. ಎಲ್. ವೇಣುಗೋಪಾಲ್, ಪಕ್ಷೇತರ- ಕರಣೆ. ಆರ್. ಹನುಮಂತಪ್ಪ, ಪಕ್ಷೇತರ- ಮಡಿಕೆ.
ಚುನಾವಣಾ ಚಿಹ್ನೆಗಳ ಹಂಚಿಕೆ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಜಂಟಿಕೃಷಿ ನಿರ್ದೇಶಕ ಲಕ್ಷ್ಮಣ್ ಸೇರಿದಂತೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಉಪಸ್ಥಿತರಿದ್ದರು. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಚುನಾವಣಾ ಖರ್ಚು, ವೆಚ್ಚಗಳ ಲೆಕ್ಕ-ಪತ್ರಗಳ ನಿರ್ವಹಣೆ ಕುರಿತಂತೆ ಚುನಾವಣಾ ವೆಚ್ಚಗಳ ನೊಡಲ್ ಅಧಿಕಾರಿಯಾಗಿರುವ ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ ಅವರು ಅಭ್ಯರ್ಥಿಗಳಿಗೆ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ನೀಡಿದರು.