ಚಿತ್ರದುರ್ಗ: ಶೈನಿಂಗ್ ಇಂಡಿಯಾ ಆಫ್ ಬೆಸ್ಟ್ ಎಂ.ಎಲ್.ಎ.ಅವಾರ್ಡ್‌ಗೆ ಕರ್ನಾಟಕದ ಹತ್ತು ಮಂದಿ ಆಯ್ಕೆಯಾಗಿದ್ದು, ಅದರಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿರವರು ಅವಾರ್ಡ್‌ಗೆ ಭಾಜನರಾಗಿದ್ದಾರೆ.
ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಚಳ್ಳೆಕೆರ ಶಾಸಕ ಟಿ.ರಘುಮೂರ್ತಿಯವರಿಗೆ ಶೈನಿಂಗ್ ಇಂಡಿಯಾ ಬೆಸ್ಟ್ ಎಂ.ಎಲ್.ಎ.ಅವಾರ್ಡ್ ನೀಡಿ ಸನ್ಮಾನಿಸಲಾಯಿತು.

ಕ್ಷೇತ್ರಗಳ ಅಭಿವೃದ್ದಿ ಹಾಗೂ ಮತದಾರರು ಮತ್ತು ಜನಸಾಮಾನ್ಯರೊಡನೆ ಹೊಂದಿರುವ ಒಡನಾಟವನ್ನು ಮಾನದಂಡವಾಗಿರಿಸಿಕೊಂಡು ಆರು ತಿಂಗಳ ಕಾಲ ಸರ್ವೆ ನಡೆಸಿ ಶೈನಿಂಗ್ ಇಂಡಿಯಾ ಆಫ್ ಬೆಸ್ಟ್ ಎಂ.ಎಲ್.ಎ.ಅವಾರ್ಡ್‌ಗೆ ಶಾಸಕರುಗಳಾದ ದೇವರಾಜ್, ಅಶ್ವಥ್‌ನಾರಾಯಣ, ಮುನಿರಾಜು, ಮುನಿರತ್ನಂ, ಪ್ರಿಯಾಂಕ ಖರ್ಗೆ, ಸುರೇಶ್‌ಗೌಡ, ಬಿ.ಎನ್.ವಿಜಯಕುಮಾರ್, ಯು.ಟಿ.ಖಾದರ್, ಕೆ.ಜೆ.ಜಾರ್ಜ್ ಇವರುಗಳನ್ನು ಆಯ್ಕೆ ಮಾಡಲಾಗಿದೆ.