.ಚಳ್ಳಕೆರೆ:  ಜೂ 21 ರಂದು ಪಟ್ಟಣದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲಾ ಆವರಣಲ್ಲಿ ನಡೆಯಲಿರುವ ವಿಶ್ವಯೋಗ ದಿನಚಾರಣೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಪತಾಂಜಲಿ ಯೋಗಶಿಕ್ಷಣ ಸಮಿತಿವತಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ಬೈಕ್  ರ್ಯಾಲಿಯನ್ನು ಹಮ್ಮಿಕೊಳ್ಳಗಿತ್ತು.
ಶಾಂತಿ ಮಂತ್ರದಿಂದ ವಿಶ್ವದ ಇತಿಹಾಸದಲ್ಲಿ ಸ್ವಾತಂತ್ರ್ಯವನ್ನು ಪಡೆದ ಏಕೈಕ ರಾಷ್ಟ್ರ ನಮ್ಮದು. ಆದ್ದರಿಂದ ಜೂನ್ 21 ರಂದು  175 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಿವೆ. ಆದ್ದರಿಂದ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರ ಹೆಚ್ಚಿನ ಸಂಖ್ಯೆಲ್ಲಿ ಭಾಗವಹಿಸಿ ಯೋಗವನ್ನು ಕಲಿತು ಸದೃಡ ಆರೋಗ್ಯ ಕಾಪಾಡಿಕೊಳ್ಳುವಂತೆ ಸಮಿತಿ ಅಧ್ಯಕ್ಷ ಹನುಮಂತಪ್ಪ ಹೇಳಿದರು.