ಚಿತ್ರದುರ್ಗ: ಲೇ. ಕೊರಚ ಲೇ ಕೊರಚ ಸೂ. ಮಗನೇ ಎಂದು ಜಾತಿನಿಂದನೆ ಮಾಡಿದ್ದು ಅಕ್ಷಮ್ಯ ಅಪರಾಧ. ಇಲ್ಲಿ ದಲಿತ ಮುಖಂಡ ಎಂದು ಹೇಳಿಕೊಂಡು ದಲಿತರಲ್ಲೆ ಶೋಷಿತರಾದ ಕೊರಚರ ಜಾತಿ ನಿಂದನೆ ಮಾಡಿರುವ ಶಿವಮೂರ್ತಿಯನ್ನು ಗಡಿಪಾರು ಮಾಡಿ ಇಲ್ಲವೆ ಗಲ್ಲಿಗೇರಿಸಿ ಎಂದು ಚಿತ್ರದುರ್ಗ ಜಿಲ್ಲಾ ಕೊರಮ ಕೊರಚ ಕ್ಷೇಮಾಭಿವೃದ್ಧಿಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸರಕಾರಕ್ಕೆ ಆಗ್ರಹಿಸಿದರು.

ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಚಳ್ಳಕೆರೆ ತಹಶೀಲ್ದಾರ್ ಕಾಂತರಾಜ್ ಮೇಲೆ ನಗರಸಭೆ ಸದಸ್ಯ ಶಿವಮೂರ್ತಿ ಮಾಡಿರುವ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯಾಧ್ಯಕ್ಷ ತಿರುಮಲಾಪುರ ಗೋಪಾಲ್ ನೇತೃತ್ವದಲ್ಲಿ ಕೊರಚ, ಕೊರಮ, ಕುಳುವ ಹಾಗೂ ಅಲೆಮಾರಿ ಶೋಷಿತ ಬುಡಕಟ್ಟು ಸಮುದಾಯಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ಕೊರಚರು,ಕೊರಮರು, ಕುಳುವರು, ಅಲೆಮಾರಿಗಳು ಅಸಂಘಟಿತರು ಎಂದು ಕೆಲ ದಲಿತ ಸಮುದಾಯಗಳು ತಿಳಿದು ಮಾತನಾಡಿರುವುದು ಸರಿಯಲ್ಲ. ಇದರ ಪರಿಣಾಮ ಬೇರೆಯಾಗಲಿದೆ ಎಂದು ಆಕ್ರೋಶ ಹೊರಹಾಕಿದರು.

ಕರ್ನಾಟಕ ಅಲೆಮಾರಿ ಅರೆಅಲೆಮಾರಿ ಮಂಡಳಿ ರಾಜ್ಯ ನಿರ್ದೇಶಕ ಸಿ.ಶಿವುಯಾದವ್ ಮಾತನಾಡಿ, ಅಲೆಮಾರಿ ಶೋಷಿತರು. ಬುಡಕಟ್ಟು ಸಮುದಾಯಗಳನ್ನು ತುಳಿಯುವ ಯತ್ನ ಸರಿಯಲ್ಲ. ಅದು ಖಂಡನೀಯ. ಇಲ್ಲಿ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯದಲ್ಲಿ ಜನಿಸಿದ ಅಧಿಕಾರಿವಿರುದ್ಧ ಧ್ವನಿ ಎತ್ತಿದ ಬಿಜೆಪಿ ಮುಖಂಡ ಶಿವಮೂರ್ತಿ ಅವನ ಸಂಸ್ಕೃತಿ ತೋರಿಸುತ್ತದೆ. ನಮ್ಮ ಒಕ್ಕೂಟ ಬೃಹತ್ ಹೋರಾಟ ಮಾಡುತ್ತದೆ ಎಂದು ಹೇಳಿದರು.
ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯಾಧ್ಯಕ್ಷ ತಿರುಮಲಾಪುರ ಗೋಪಾಲ್ ಮಾತನಾಡಿದರು.
ಕರ್ನಾಟಕ ಅಲೆಮಾರಿ ಅರೆಅಲೆಮಾರಿ ಮಂಡಳಿ ರಾಜ್ಯ ನಿರ್ದೇಶಕ ಸಿ.ಶಿವುಯಾದವ್, ಕುಳುವ ಸಮಾಜದ ಉಪಾಧ್ಯಕ್ಷೆ ಜಯಶೀಲಾ, ಚಿತ್ರದುರ್ಗ ಜಿಲ್ಲಾ ಕೊರಮ ಕೊರಚ ಕ್ಷೇಮಾಭಿವೃದ್ಧಿಸಂಘದ ಜಿಲ್ಲಾ ಉಪಾಧ್ಯಕ್ಷ ನರಸಿಂಹಮೂರ್ತಿ, ಕಾರ್ಯದರ್ಶಿ ಪರಮೇಶ್ವರಪ್ಪ ಇತರರು ಇದ್ದರು.