ಹೊಸದುರ್ಗ: ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ನಾಟಕ ಎಂದು ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದ್ದಾರೆ.

ಮೊದಲಿಂದಲೂ ವಿನಾ ಕಾರಣ ನನ್ನನ್ನು ಹಾಗೂ ಪೊಲೀಸರನ್ನು ಆರೋಪಿಸುವುದು ಗೂಳಹಟ್ಟಿಗೆ ಮಾಮೂಲಾಗಿದೆ. ಅವರು ಶಾಸಕರ ಬೆಂಬಲದಿಂದ ಮಧುರೆ ಗ್ರಾಮದ ಪ್ರವೀಣ ೫೦೦ ಲೋಡು ಮರಳು ಸಂಗ್ರಹಿಸಿದ್ದರು. ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ಹಿಡಿದಾಗ ಶಾಸಕರಿಗೆ ಬಿಡಿಸುವಂತೆ ಕೇಳಿದ್ದಾನೆ. ಬಿಡಿಸದಿದ್ದರೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪೊಲೀಸ್ ಠಾಣೆ ಎದುರು ಹೆದರಿಸಿದ್ದಾನೆ.
ಆಗ ಆತನ ಕೈಯಲ್ಲಿದ್ದ ಪೆಟ್ರೋಲ್ ಬಾಟಲಿಯನ್ನು ಕಿತ್ತುಕೊಂಡು ಗೂಳಿಹಟ್ಟಿ ಶೇಖರ್ ಅವರೇ ಸುರಿದುಕೊಂಡಿದ್ದಾರೆ ಈಗ ಪೊಲೀಸರ ದೌರ್ಜನ್ಯದಿಂದ ಆತ್ಮಹತ್ಯೆಗೆ ಯತ್ನಿಸಿದೆ ಎಂದು ಹೇಳಿಕೆ ನೀಡಿರುವುದು ಶುದ್ಧ ಸುಳ್ಳು ಎಂದು ಬಿಜಿ ಹೇಳಿದ್ದಾರೆ.