ವಿಜಯಪುರ: ಕಾಲ ಎಲ್ಲವೂ ಬದಲಾಗುತ್ತೆ. ಹಿಂದಿನಿಂದಲೂ ಗಂಡ ಹೆಂಡತಿಗೆ ತಾಳಿಕಟ್ಟುವುದು ಲೋಕದಲ್ಲಿ ರೂಢಿ ಆದ್ರೆ…

ವಿಜಯಪುರ ಜಿಲ್ಲೆ ವಿಶೇಷ ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಗಿದೆ. ವಧು ವರನಿಗೆ ತಾಳಿ ಕಟ್ಟುವ ಮೂಲಕ ವಿನೂತನವಾಗಿ ವಿಹಾಹವಾಗಿದ್ದಾರೆ. 

ನಿನ್ನೆ ಮುದ್ದೇಬಿಹಾಳ  ತಾಲೂಕಿನ ನಾಲತವಾಡ ಪಟ್ಟಣದ ಹಳ್ಳೂರ ಪ್ಯಾಲೇಸ್​ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವರ ಪ್ರಭುರಾಜಗೆ ವಧು ಅಂಕಿತಾ ಹಾಗೂ ವರ ಅಮಿತ್ ಗೆ ವಧು ಪ್ರಿಯಾ ತಾಳಿ ಕಟ್ಟುವ ಮೂಲಕ ವಿಶೇಷವಾಗಿ ನವ ದಾಂಪತ್ಯಕ್ಕೆ ಕಾಲಿಟ್ಟರು. ತಾಳಿಯ ಜೊತೆಗೆ ರುದ್ರಾಕ್ಷಿ ಪೋಣಿಸಿ ಕಟ್ಟುವ 12ನೇ ಶತಮಾನದ ರೂಢಿಯನ್ನು ಇಲ್ಲಿ ಪಾಲಿಸಲಾಯಿತು.