ಉಡುಪಿ; ಪ್ರಯಾಣಿಕರನ್ನು ಬಸ್‌ಗೆ ಹತ್ತಿಸಿಕೊಳ್ಳುವ ವಿಚಾರಕ್ಕೆ ಸಂಬ0ಧಿಸಿದ0ತೆ ರಾಡ್ ಹಿಡಿದು ಖಾಸಗಿ ಬಸ್ ಸಿಬ್ಬಂದಿಗಳು ಜಗಳವಾಡಿದ್ದಾರೆ. ಕೊಹಿನೂರ್ ಬಸ್ ಚಾಲಕ ಸಫಿಯುಲ್ಲಾ ಹಾಗೂ ಎ.ಕೆ.ಎಂ.ಎಸ್.ಎಸ್ ಚಾಲಕ ಇರ್ಷಾದ್ ಹಾಗೂ ನಿರ್ವಾಹಕ ಪವನ್ ಶೆಟ್ಟಿ ನಡುವೆ ಗಲಾಟೆ ನಡೆದಿದೆ. ಈ ಘಟನೆಯು ಉಡುಪಿಯ ಕಾಪುವಿನಲ್ಲಿ ನಡೆದಿದೆ. ಎರಡೂ ಬಸ್ ಸಿಬ್ಬಂದಿಗಳು ಅಜಾಗರೂಕತೆ ಹಾಗೂ ಅತೀ ವೇಗದಿಂದ ಚಾಲನೆ ನಡೆಸುತ್ತಿದ್ದರು. ಪ್ರಯಾಣಿಕರನ್ನು ಹತ್ತಿಸುವ ವಿಚಾರದಲ್ಲಿ ಪರಸ್ಪರ ರಾಡ್ ಹಿಡಿದು ಜಗಳವಾಡಿದ್ದಾರೆ. ಇದೀಗ ಜಗಳದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಸ್‌ನಲ್ಲಿ ಪ್ರಯಾಣಿಕರಿದ್ದ ಸಂದರ್ಭದಲ್ಲೇ ಗೂಂಡಾವರ್ತನೆ ತೋರಿರುವ ಸಿಬ್ಬಂದಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಪೊಲೀಸ್ ಇಲಾಖೆ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ