ಬೆಂಗಳೂರು: ಕ್ಷೌರದಂಗಡಿಗಳಿಂದ ಸೋಂಕು ಹರಡದಂತೆ ನಿಯಂತ್ರಿಸಲು ಆರೋಗ್ಯ ಇಲಾಖೆ ಮಾರ್ಗಸೂಚಿ ರೂಪಿಸಿದೆ.

ಜ್ವರ, ಶೀತ, ಕೆಮ್ಮು ಇರುವವರಿಗೆ ಪ್ರವೇಶ ನಿಷೇಧಿಸಬೇಕು. ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್‌ ಇಟ್ಟಿರಬೇಕು. ಕ್ಷೌರಿಕರು ಕಡ್ಡಾಯವಾಗಿ ಮಾಸ್ಕ್, ತಲೆಗವಸು ಮತ್ತು ಅಪ್ರಾನ್‌ ಧರಿಸಬೇಕು.

ಒಬ್ಬರಿಗೆ ಬಳಸಿದ ಟವೆಲ್ ಬೇರೊಬ್ಬರಿಗೆ ಬಳಸುವಂತಿಲ್ಲ. ಕ್ಷೌರದ ಪ್ರತಿ ಸಾಧನವನ್ನು ಲೈಸಾಲ್‌ ನಿಂದ ಸ್ಯಾನಿಟೈಸ್‌ ಮಾಡಬೇಕು. ಪ್ರತಿ ಕ್ಷೌರದ ಬಳಿಕ ಕ್ಷೌರಿಕ ಹ್ಯಾಂಡ್‌ ವಾಶ್‌ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.