ಚಿತ್ರದುರ್ಗ : ಮುಂದಿನ ವರ್ಷಗಳಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಜನತೆ ಶುದ್ದವಾದ ಕುಡಿಯುವ ನೀರನ್ನು ಕುಡಿಯಲು ಅನುಕೂಲವಾಗುವಂತೆ ಎಲ್ಲಾ ಕಡೆಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು, ಜೊತೆಗೆ ಚಿತ್ರದುರ್ಗದ ಸುತ್ತಾ-ಮುತ್ತಲ್ಲಿನ ಪ್ರದೇಶದಲ್ಲಿ ಸುಮಾರು ೧೫೦ ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಅದರಲ್ಲಿ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡುವ ಸಂಬಂಧ ಪ್ರಕ್ರಿಯೇ ನಡೆಯುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ಚಿತ್ರದುರ್ಗ ನಗರದ ಬುರುಜನಹಟ್ಟಿ ಏಕನಾಥೇಶ್ವರಿ ಪಾದಗುಡಿಯ ಬಳಿಯಲ್ಲಿ ಸುಮಾರು ೧೮ ಲಕ್ಷ ರೂ,ಗಳ ಶಾಸಕರ ನಿಧಿಯಿಂದ ನೂತನವಾಗಿ ನಿರ್ಮಾಣವಾಗಿರುವ ಸಮುದಾಯ ಭವನವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಗರದಲ್ಲಿ ವಿವಿಧ ಕಂಪನಿಗಳು,ಖಾಸಗಿಯವರು ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಗ್ರಾಮಾಂತರ ಪ್ರದೇಶದ ಜನತೆಗೆ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಹೆಚ್ಚು ಒತ್ತು ನೀಡಲಾಗಿದೆ. ಮುಂದಿನ ೨-೩ ವರ್ಷಗಳಲ್ಲಿ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಎಲ್ಲಾ ಗ್ರಾಮಾಂತರ ಪ್ರದೇಶಗಳಿಗೂ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ಚಿತ್ರದುರ್ಗದಲ್ಲಿ ಆಶ್ರಯ ಮನೆ ಮತ್ತು ನಿವೇಶನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಸರಿಯಾದ ರೀತಿಯಲ್ಲಿ ಜಾಗ ಸಿಗುತ್ತಿಲ್ಲ, ಆದರೆ ಈಗ ಕುಂಚಿಗನಾಳ್ ಬಳಿಯಲ್ಲಿ ೧೦೨, ಮದೇಹಳ್ಳಿ ಬಳಿಯಲ್ಲಿ ೧೨ ಮತ್ತು ಮಾಳಪ್ಪನಹಟ್ಟಿ ಬಳಿಯಲ್ಲಿ ೪೦ ಎಕರೆ ಸೇರಿದಂತೆ ಸುಮಾರು ೧೫೦ ಎಕರೆ ಸರ್ಕಾರದ ಜಾಗ ಸಿಕ್ಕಿದೆ. ಅದನ್ನು ಅಶ್ರಯ ಯೋಜನೆಗೆ ಬಳಕೆ ಮಾಡುವ ಸಂಬಂಧ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಅವರು ಸ್ವಲ್ಪ ನಿಧಾನ ಮಾಡುತ್ತಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆಯಲ್ಲಿ ಮಾತನಾಡುವುದರ ಮೂಲಕ ಈ ಜಾಗದಲ್ಲಿ ಆಶ್ರಯ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಈ ೧೫೦ ಎಕರೆ ಪ್ರದೇಶದಲ್ಲಿ ಜಿಲ್ಲಾಡಳಿತ ೫೦ ಎಕರೆ ಭೂಮಿಯನ್ನು ವಿವಿಧ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ ಉಳಿದ ಭೂಮಿಯಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಲಾಗುವುದು ಎಂದರು.
ಈ ಸಮುದಾಯ ಭವನ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಬಹು ದಿನಗಳಿಂದ ಬೇಡಿಕೆ ಇತ್ತು ಈಗ ಪೋರೈಕೆ ಮಾಡಲಾಗಿದೆ. ಇದಕ್ಕೆ ಅಡುಗೆ ಮನೆ ಮತ್ತು ಮೇಲ್ಗಂಡೆ ಇನ್ನೂಂದು ವಿಶಾಲವಾದ ಹಾಲ್ ನಿರ್ಮಾಣ ಮಾಡಬೇಕೆಂದು ಈ ಭಾಗದ ಜನತೆ ಮನವಿ ಮಾಡಿದ್ದಾರೆ ಇದರ ಬಗ್ಗೆ ಆಲೋಚನೆ ಮಾಡಲಾಗುವುದು, ಇದ್ದಲ್ಲದೆ ಈ ಭಾಗದ ಯುವ ಜನತೆ ದೈಹಿಕವಾಗಿ ಸಧೃಡರಾಗಿರಲು ಸುಮಾರು ೬ ಲಕ್ಷ ರೂ ಮೌಲ್ಯದ ಆಧುನಿಕ ಜಿಮ್ ನೀಡಲಾಗಿದೆ. ಇಲ್ಲಿ ಯಾವುದೇ ರೀತಿಯ ಜಾತಿ, ಜನಾಂಗ, ಪಕ್ಷ ಎಂಬ ಭೇದ ಇಲ್ಲದೆ ಉಪಯೋಗ ಮಾಡುವುಂತೆ ಮನವಿ ಮಾಡಿದರು.
.ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷ, ನಗರಸಭೆಯ ಮಾಜಿ ಅಧ್ಯಕ್ಷ ಹೆಚ್, ಮಂಜಪ್ಪ, ಸದಸ್ಯರಾದ ಶ್ರೀರಾಮ್, ತಿಮಕ್ಕ, ಮುಖಂಡರಾದ ಯುವರಾಜ್, ಮೀನಾಕ್ಷ್ಮಿ, ಜಯಶಂಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.