ಚಿತ್ರದುರ್ಗ: ಕೋಟೆ ಆವರಣದಲ್ಲಿರುವ ಬನಶಂಕರಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ವಿಶೇಷ ಪೂಜೆ ನೆರವೇರಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.

ಬನಶಂಕರಿ ದೇವಸ್ಥಾನ ಅಭಿವೃದ್ದಿ ಸಮಿತಿ ಹಾಗೂ ಕೋಟೆ ವಾಯುವಿಹಾರಿಗಳ ಸಂಘದಿಂದ ನಡೆದ ಕಾರ್ತಿಕ ಮಾಸದ ಪೂಜೆಯಲ್ಲಿ ಬನಶಂಕರಿ ಅಮ್ಮನನ್ನು ಬಗೆ ಬಗೆಯೂ ಹೂವು, ಹಾರ ಹಾಗೂ ಹಸಿರು ಪತ್ರೆಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದ ಸುತ್ತಲೂ ದೀಪಗಳು ಝಗಮಗಿಸುತ್ತಿದ್ದವು.
ಸಂಜೆಯಿಂದ ರಾತ್ರಿಯವರೆಗೂ ಆಗಮಿಸಿದ ನೂರಾರು ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.
ಕೋಟೆ ವಾಯುವಿಹಾರಿಗಳ ಸಂಘದ ಮಹಿಳಾ ನಿರ್ದೇಶಕಿಯರುಗಳಾದ ರತ್ನಮ್ಮ, ಲತ, ವನಜಾಕ್ಷಿ, ಮಹದೇವಮ್ಮ, ವೀಣ, ಕಮಲ, ಶೋಭ, ಉಮಾದೇವಿ, ಶೋಭಕ್ಕ, ಮಂಜುಳ, ಜಯಶ್ರಿ, ಅಂಬುಜ, ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ, ಗೌರವಾಧ್ಯಕ್ಷ ಜಯಣ್ಣ, ನಿರ್ದೇಶಕರುಗಳಾದ ಕೂಬಾನಾಯ್ಕ, ನರಸಿಂಹಪ್ಪ, ನಗರಸಭೆ ಸದಸ್ಯ ಶ್ರೀನಿವಾಸ್ ಈ ಸಂದರ್ಭದಲ್ಲಿ ಹಾಜರಿದ್ದರು.

ಬನಶಂಕರಿ ದೇವಸ್ಥಾನದ ಅರ್ಚಕ ಕ್ಯಾತಣ್ಣ ಶ್ರದ್ದಾಭಕ್ತಿಯಿಂದ ಕಾರ್ತಿಕ ಮಾಸದ ಪೂಜೆ ನೆರವೇರಿಸಿದರು.