ಚಿತ್ರದುರ್ಗ: ಐತಿಹಾಸಿಕ ಚಿತ್ರದುರ್ಗ ಕೋಟೆಯಲ್ಲಿರುವ ಬನಶಂಕರಿ ಅಮ್ಮನಿಗೆ ಭಾನುವಾರ ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.

ಸೂರ್ಯಗ್ರಹಣದ ನಂತರ ಮಧ್ಯಾಹ್ನ ದೇವಸ್ಥಾನದ ಬಾಗಿಲು ತೆರೆದು ಬಗೆ ಬಗೆಯ ಹೂವು ಹಾರದ ಜೊತೆ ನಿಂಬೆಹಣ್ಣು ಮತ್ತು ಹತ್ತಿಯ ಹಾರಗಳಿಂದ ಬನಶಂಕರಿ ಅಮ್ಮನನ್ನು ಶೃಂಗರಿಸಲಾಗಿತ್ತು. ಸೂರ್ಯಗ್ರಹಣ ಬಿಟ್ಟ ನಂತರ ನೂರಾರು ಭಕ್ತರು ದೇವಸ್ಥಾನಕ್ಕೆ ತೆರಳಿ ಬನಶಂಕರಿ ಅಮ್ಮನ ದರ್ಶನ ಪಡೆದರು.

ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಸತ್ಯಣ್ಣ, ಗೌರವಾಧ್ಯಕ್ಷ ಜಯಪ್ಪ, ಸದಸ್ಯರುಗಳಾದ ನರಸಿಂಹಪ್ಪ, ಕೂಬಾನಾಯ್ಕ, ಭದ್ರಣ್ಣ ಇನ್ನು ಮೊದಲಾದವರು ಪೂಜೆಯ ಸಂದರ್ಭದಲ್ಲಿ ಹಾಜರಿದ್ದರು. ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.