ಬೆಂಗಳೂರು: ಇದೇ ಮೊದಲ ಬಾರಿಗೆ ಕೋರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಪೋಸ್ಟ್ ಮಾರ್ಟಮ್ ನಡೆಸಲಾಗಿದ್ದು, ಈ ವೇಳೆ ಭಯಾನಕ ಸಂಗತಿಗಳು ಬಯಲಾಗಿವೆ.

ವ್ಯಕ್ತಿ ಸತ್ತ 18 ಗಂಟೆಗಳ ಬಳಿಕವೂ ವೈರಸ್ ಜೀವಂತವಾಗಿದೆ. ಸೋಂಕಿತ ವ್ಯಕ್ತಿಯ ಶ್ವಾಸಕೋಶ ಕಾರ್ಕ್ ಬಾಲ್ ನಷ್ಟು ಗಟ್ಟಿಯಾಗಿ ಹೋಗಿದೆ. ಅಷ್ಟೇ ಅಲ್ಲದೆ, ಮೆದುಳಿನಲ್ಲಿ ರಕ್ತಸ್ರಾವವಾಗಿ ಹೃದಯ, ಲಿವರ್ ಹಾಗೂ ಶ್ವಾಸಕೋಶಗಳು ಸಂಪೂರ್ಣವಾಗಿ ಹಾನಿಯಾಗಿವೆ ಎಂಬ ಭಯಾನಕ ಸಂಗತಿಯನ್ನು ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ತಿಳಿಸಿದ್ದಾರೆ.