ಆಳಂದ: ಕೊರೋನಾದಿಂದಾದ ಪ್ರತಿಕೂಲ ವ್ಯವಸ್ಥೆಗೆ ಬೇಸತ್ತು ರೈತನೊಬ್ಬ ನೇಣಿಗೆ ಶರಣಾಗಿದ್ದಾರೆ. ಲಾಕ್‌ಡೌನ್‌ ಅನಾನುಕೂಲದಿಂದ ಆಳಂದ ತಾಲೂಕಿನ ಲಾಡ ಚಿಂಚೋಳಿಯ ಚಂದ್ರಕಾಂತ ಬಿರಾದಾರ ಎಂಬ ರೈತ ಕಲ್ಲಂಗಡಿ ಸರಬರಾಜು ಮಾಡಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಂದ್ರಕಾಂತ 3 ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದರು. ಲಾಕ್‌ಡೌನ್‌ ಹಿನ್ನೆಲೆ ಸಾಗಾಟ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದ ಮನನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.