ಚಿತದುರ್ಗ:ಹಾಡುಗಾರರಲ್ಲಿ ಮತ್ತು ಕೇಳುಗರಲ್ಲಿ ಭಕ್ತಿಯ ವಾತಾವರಣವನ್ನು ಮೂಡಿಸುವುದು ಭಾರತೀಯ ಶಾಸ್ತ್ರೀಯ ಸಂಗೀತವಾಗಿದೆ ಎಂದು ಸಂಸ್ಕಾರ ಭಾರತೀ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ ತಿಳಿಸಿದರು.

ಸಂಸ್ಕಾರ ಭಾರತೀ ಕರ್ನಾಟಕ, ಪತಂಜಲಿ ಕಲ್ಚರಲ್ ಅಕಾಡೆಮಿ ಬಾಹ್ಮಣರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ರಾಜ್ಯ ಮಟ್ಟದ ಸಂಗೀತ ಕಾರ್ಯಗಾರ ಸ್ವರಾನ್ವೇಷಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ ದೇಶದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಪುರಾತನವಾದದ್ದು ದೇಶದ ಸ್ವಾತಂತ್ರ ಕಾಲದಲ್ಲಿ ಸಂಗೀತಗಾರರು ತಮ್ಮದೇ ಆದ ಭಜನೆ, ಹಾಡುಗಾರಿಕೆಯ ಮೂಲಕ ದೇಶಭೀಮಾನವನ್ನು ಬಡೆದಿಬ್ಬಿಸಿದರು. ಸಂಗೀತಗಳಲ್ಲ ವಿವಿಧ ರೀತಿಯ ಪ್ರಕಾರಗಳಿದ್ದರೂ ಸಹಾ ಅವುಗಳ ಮೂಲ ಮಾತ್ರ ಭಾರತೀಯ ಶಾಸ್ತ್ರೀಯ ಸಂಗೀತವೇ ಆಗಿದೆ, ನದಿಗಳು ಎಷ್ಟೇ ಹರಿದರು ಸಹಾ ಕೊನೆಯಲ್ಲಿ ಸೇರುವುದು ಸಮುದ್ರವೆಂಬಂತೆ ಸಂಗೀತಗಳಲ್ಲಿ ವಿವಿಧ ರೀತಿಯ ಹಾಡುಗಾರಿಕೆ ಇದ್ದರೂ ಸಹಾ ಅವುಗಳು ನಮ್ಮ ಸಂಸ್ಕೃತಿಯಿಂದಲೇ ಬಂದಿದೆ ಸಪ್ತ ಸ್ವರ ಮತ್ತು ರಾಗಗಳು ಸಹಾ ಇದರಿಂದಲೇ ಬಂದಿದೆ ಎಂದರು.

ಸಂಗೀತಮ ಯಾರೂಬ್ಬರ ಆಸ್ತಿ ಅಲ್ಲ ಅದು ಸಮಾಜದ ಆಸ್ತಿ ಅದನ್ನು ಉಳಿಸುವುದರ ಜೊತೆಗೆ ಇಂದಿನ ಯುವ ಪೀಳಿಗೆಗೆ ತಿಳಿಸಿ ಕಲಿಸಬೇಕಿದೆ ಇದರಿಂದ ಮಾತ್ರ ನಮ್ಮ ಪುರಾತನವಾದ ಸಂಗೀತ ಉಳಿಯಲು ಸಾಧ್ಯವಿದೆ. ಸಂಗೀತವನ್ನು ಕಲಿತು ಹಾಡಿದಾಗ ಅವರೊಬ್ಬರಿಗೆ ಸಂತೋಷವನ್ನು ನೀಡದೇ ಕೇಳುಗರಿಗೂ ಸಹಾ ಸಂತೋಷವನ್ನು ನೀಡುತ್ತದೆ, ಶಾಸ್ತ್ರೀಯ ಸಂಗೀತ ಭಕ್ತಿಯ ಸಂಗೀತವಾಗಿದೆ ಅದರ ಹಾಡುಗಾರಿಕೆಯಿಂದ ಸುತ್ತ-ಮುತ್ತಲ್ಲಿನ ವಾತಾವರಣವು ಸಹಾ ಭಕ್ತಿಯಿಂದ ಕೊಡಿರುತ್ತದೆ ಎಂದ ಕೃಷ್ಣಮೂರ್ತಿ ಹೇಳಿದರು.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ,ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಮಂಜುನಾಥ್‌ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಬಿರದ ನಿದೇಶಕರಾದ ನಾಗಮಣಿ ಶ್ರೀನಾಥ್, ಸಂಯೋಜಕರಾದ ಶ್ರೀಮತಿ ಆಶಾ ಜಗದೀಶ್, ದಕ್ಷಿಣ ಪ್ರಾಂತ್ಯದ  ರಾಜೀವ ಲೋಚನಾ, ಸಂಘದ ನಿರ್ದಶಕರಾದ ಶ್ರೀಮತಿ ಆಶಾ ಭಾಗವಹಿಸಿದ್ದರು