ಚಿತ್ರದುರ್ಗ: ಕರ್ನಾಟಕ ಸರ್ಕಾರವು ಕೆಪಿಎಸ್‍ಸಿ ಮೂಲಕ ಎಸ್.ಡಿ.ಎ/ಎಫ್.ಡಿ.ಎ. ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿಗಳನ್ನು ದಿನಾಂಕ: 11-02-2019ರಿಂದ ಭರ್ತಿ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಸರಿಯಷ್ಠೆ.

ಆಂದಿನಿಂದ ಇಲ್ಲಿಯವರಿಗೆ ಆನ್‍ಲೈನ್ ಅರ್ಜಿ ಸಲ್ಲಿಸಲು ತಾಂತ್ರಿಕ ದೋಷ ಸಂಪೂರ್ಣ ಇರುತ್ತದೆ. ಈ ಹಿಂದೆ ಇದೇ ಮಾರ್ಚ್-12ಕ್ಕೆ ಕೊನೆಯ ದಿನಾಂಕವಾಗಿತ್ತು. ಆದರೆ ತಾಂತ್ರಿಕದೋಷದ ಕಾರಣ ಮಾರ್ಚ್ 20ಕ್ಕೆ ಕೊನೆಯ ದಿನಾಂಕವಾಗಿರುತ್ತದೆ.

ಆನ್‍ಲೈನ್ ಅರ್ಜಿ ಪ್ರಾರಂಭವಾದ ದಿನಾಂಕದಿಂದ ಈದಿನದವರೆಗೂ ಯಾವುದೇ ಸಮಯದಲ್ಲಿ ಆನ್‍ಲೈನ್ ಅರ್ಜಿಗಳು ಸರಾಗವಾಗಿ ಸಲ್ಲಿಕೆಯಾಗಿರುವುದಿಲ್ಲ. ಕೆಪಿಎಸ್‍ಸಿಯ ದೂರವಾಣಿ ಸಂಖ್ಯೆಗಳು ನಾಟ್ ರೀಚಬಲ್ ಆಗಿರುತ್ತವೆ. ಹಾಗೂ ಯಾವುದೇ ರೀತಿಯ ದೂರುಗಳನ್ನು ಸ್ವೀಕರಿಸಿ ತಾಂತ್ರಿಕ ದೋಷ ಸರಿಪಡಿಸುವಲ್ಲಿ ಆಯೋಗವು ಸಂಪೂರ್ಣ ವಿಫಲವಾಗಿರುತ್ತದೆ. ಆದ್ದರಿಂದ ತಾವುಗಳು ದಯಮಾಡಿ ಆಯೋಗಕ್ಕೆ ಅರ್ಜಿಗಳಲ್ಲಿ ಉಂಟಾಗಿರುವ ತಾಂತ್ರಿಕ ದೋಷವನ್ನು ಸರಿಪಡಿಸಿ ಅರ್ಜಿ ಸಲ್ಲಿಕೆಗೆ ಮತ್ತೆ ಸಮಯವನ್ನು ಮುಂದೂಡಿಸಿಕೊಟ್ಟು ಅನುಕೂಲ ಮಾಡಿಕೊಡಬೇಕೆಂದು ಡಿ.ಗಿರೀಶ್ ಅವರು ಮುಖ್ಯ ಮಂತ್ರಿಗಳಿಗೆ ಮನವಿಮಾಡಿದ್ದಾರೆ.