ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಮಾತನಾಡಿ ಕೋಳಿ ಮತ್ತು ಮೊಟ್ಟೆ ಸೇವಿಸಿರುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ. ಆ ಮೂಲಕ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಿದ್ರು.

ಇನ್ನು ಮುಂದೆ ಜನ ಸಾಮಾನ್ಯರು ಕೋಳಿ ಮತ್ತು ಮೊಟ್ಟೆ ಹೆಚ್ಚಾಗಿ ತಿನ್ನಬೇಕು, ಹಾಗೂ ಶಿವಮೊಗ್ಗದಲ್ಲಿ ಈವರೆಗೂ ಒಂದೇ ಒಂದೇ ಕೊರೋನಾ ಪ್ರಕರಣ ದೃಢಪಟ್ಟಿಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಹೇಳಿದ್ದಾರೆ.