ಚಿತ್ರದುರ್ಗ; ದಸರಾ ಹಬ್ಬದ ವಿಶೇಷ ಪೂಜಾ ಮಹೋತ್ಸವದ ಅಂಗವಾಗಿ ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮಿಗೆ ಧನಲಕ್ಷ್ಮಿ ಮಾತಾ ಅಲಂಕಾರ ಮಾಡಲಾಗಿತ್ತು.

ಗುಲಾಬಿ, ಸೇವಂತಿಗೆ, ಹಸಿರುಪತ್ರೆಯ ದೊಡ್ಡ ಹಾರ ಹಾಗೂ ಬೆಳ್ಳಿ ಆಭರಣಗಳಿಂದ ಸಿಂಗರಿಸಲಾಗಿತ್ತು. ಮಹಾಲಕ್ಷ್ಮಿ ದರ್ಶನಕ್ಕೆ ಆಗಮಿಸಿದ್ದ ನೂರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.