ಚಿತ್ರದುರ್ಗ :ಕೆಎಸ್‍ಐಸಿ ಮೈಸೂರು ಸಿಲ್ಕ್ ಸೀರೆ ಶೇ 100 ರಷ್ಟು ಪರಿಶುದ್ಧ ರೇಷ್ಮೆಯಿಂದ ತಯಾರಿಸಿದ್ದು, ಉತ್ತಮ ಗುಣಮಟ್ಟವುಳ್ಳದಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಹೇಳಿದರು.

ನಗರದ ಐಎಂಎ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಕೆಎಸ್‍ಐಸಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ಹಾಗೂ ವಿನೂತನ ವಿನ್ಯಾಸದ  ಜರಿಸೀರೆ ಬಿಡುಗಡೆಗೊಳಿಸಿ ಮಾತನಾಡಿದರು.

ಸೀರೆ ಪ್ರದರ್ಶನದ ಬಗ್ಗೆ ಹೆಚ್ಚು ಪ್ರಚಾರ ನೀಡಿ, ಈ ಪ್ರದರ್ಶನದಲ್ಲಿ ಹೆಚ್ಚು ಮಹಿಳೆಯರು ಭಾಗವಹಿಸುವಂತಾಗಬೇಕು. ಶೇ. 100 ರಷ್ಟು ಪರಿಶುದ್ಧ ರೇಷ್ಮೆಯಿಂದ ತಯಾರಿಸಿದ ಸಿಲ್ಕ್ ಸೀರೆಗಳು ಕೆಎಸ್‍ಐಸಿಯಲ್ಲ್ಲಿ ದೊರೆಯುತ್ತವೆ. ಹಣಕ್ಕೆ ತಕ್ಕಂತೆ ಉತ್ತಮ ಗುಣಮಟ್ಟದ ಸೀರೆಗಳಿದ್ದು, ಜಿಲ್ಲೆಯ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಹೇಳಿದರು.