ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಸಹಕಾರ ಸಂಘಗಳ ಕಾಯ್ದೆಯಡಿ ಜಿಲ್ಲೆಯಲ್ಲಿ ನೊಂದಣಿಯಾದ ಸಹಕಾರ ಸಂಘಗಳು ಬೈಲಾ ಮತ್ತು ನಿಯಮಾನುಸಾರ ಕಾರ್ಯ ನಿರ್ವಹಿಸದೆ ಸ್ಥಗಿತಗೊಂಡಿರುವ 36 ಸಹಕಾರ ಸಂಘಗಳನ್ನು ಸಮಾಪನೆಗೊಳಿಸಲು ನಿರ್ಧರಿಸಲಾಗಿದೆ. ಸಮಾಪನೆಗೊಳ್ಳಲಿರುವ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದಲ್ಲಿ, ಆಡಳಿತ ಮಂಡಳಿ ಸದಸ್ಯರು/ಸಂಘದ ಸದಸ್ಯರು/ಸಂಘದ ನೌಕರರು ಸಂಘದ ದಾಖಲೆಗಳಿದ್ದಲ್ಲಿ ಈ ಪ್ರಕಟಣೆಯ 7 ದಿನಗಳೊಳಗೆ ಸಹಕಾರ ಇಲಾಖೆಗೆ ಖುದ್ದಾಗಿ ಬಂದು ಮಾಹಿತಿ ಸಲ್ಲಿಸತಕ್ಕದ್ದು. ತಪ್ಪಿದಲ್ಲಿ ಕರ್ನಾಟಕ ಸಹಕಾರ ಸಹಕಾರ ಸಂಘಗಳ ಕಾಯ್ದೆಯನ್ವಯ ಸಮಾಪನೆಗೊಳಿಸಲಾಗುವುದು ಎಂದು ಚಿತ್ರದುರ್ಗ ಉಪವಿಭಾಗದ ಸಹಕಾರ ಸಂಘಗಳ ಇಲಾಖೆ ಸಹಾಯಕ ನಿಬಂಧಕರು ತಿಳಿಸಿದ್ದಾರೆ. ಸಮಾಪನೆಗೊಳಿಸಲು ನಿಧರಿಸಲಾದ ಸಹಕಾರ ಸಂಘಗಳ ವಿವರ ಹೀಗಿದೆ.
ಚಿತ್ರದುರ್ಗ ತಾಲ್ಲೂಕು:- ಹಾಲು ಉತ್ಪಾದಕರ ಸಹಕಾರ ಸಂಘ ನಿ, ಮದಕರಿಪುರ, ತಾಲ್ಲೂಕು ಪೊಲೀಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ, ಚಿತ್ರದುರ್ಗ, ಚಿತ್ರದುರ್ಗ ಜಿಲ್ಲಾ ಹರಿಜನಾರ್ಥಿಕಾಭಿವೃದ್ದಿ ಸಹಕಾರ ಸಂಘ ನಿ, ಚಿತ್ರದುರ್ಗ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಚಳ್ಳಕೆರೆ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ನಾಗಗೊಂಡನಹಳ್ಳಿ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಹುಳ್ಳಿಕಟ್ಟೆ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ದೊಣೆಹಳ್ಳಿ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಮತ್ಸಂದ್ರ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಕುರುಡಿಹಳ್ಳಿ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಹರವಿಗೊಂಡನಹಳ್ಳಿ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಓಬಣ್ಣನಹಳ್ಳಿ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಪಗಡಲಬಂಡೆ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಭರಮಸಾಗರ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಗೊರ್ಲತ್ತು, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಪಾತಪ್ಪನಗುಡಿ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಮನ್ನೇಕೋಟೆ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಲಕ್ಷ್ಮೀಪುರ.
ಮೊಳಕಾಲ್ಮೂರು ತಾಲ್ಲೂಕು:- ಜ್ಯೋತಿ ಪತ್ತಿನ ಸಹಕಾರ ಸಂಘ ನಿ, ರಾಂಪುರ.
ಹಿರಿಯೂರು ತಾಲ್ಲೂಕು:- ಹಾಲು ಉತ್ಪಾದಕರ ಸಹಕಾರ ಸಂಘ ನಿ, ಕೋಡಿಹಳ್ಳಿ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಗೊಲ್ಲಹಳ್ಳಿ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಗಂಜಲಗುಂಟೆ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ದಿಂಡಾವರ.
ಹೊಳಲ್ಕೆರೆ ತಾಲ್ಲೂಕು:- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಉಪ್ಪರಿಗೇನಹಳ್ಳಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, ಚಿತ್ರಹಳ್ಳಿ, ಶ್ರೀ ಕನಕ ಪತ್ತಿನ ಸಹಕಾರ ಸಂಘ ನಿ, ಹೊಳಲ್ಕೆರೆ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಗಿಲಿಕೇನಹಳ್ಳಿ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಗುಡ್ಡದಶಾಂತೇನಹಳ್ಳಿ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಈಚಘಟ್ಟ, ಮಲ್ಲಾಡಿಹಳ್ಳಿ ಹತ್ತಿ ಕೈಮಗ್ಗ ನೇಕಾರರ ಮತ್ತು ಉತ್ಪಾದನಾ ಮಾರಾಟ ಸಹಕಾರ ಸಂಘ ನಿ, ಮಲ್ಲಾಡಿಹಳ್ಳಿ, ಅನಾಥ ಸೇವಾಶ್ರಮ ಸಹಕಾರ ಸಂಘ ನಿ, ಮಲ್ಲಾಡಿಹಳ್ಳಿ.
ಹೊಸದುರ್ಗ ತಾಲ್ಲೂಕು:- ಹಾಲು ಉತ್ಪಾದಕರ ಸಹಕಾರ ಸಂಘ ನಿ, ನಾಗರಕಟ್ಟೆ, ಹಾಲು ಉತ್ಪಾದಕರ ಸಹಕಾರ ಸಂಘ ನಿ, ಕಂಚೀಪುರ, ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಪರಿಶಿಷ್ವಜಾತಿ ಪರಿಶಿಷ್ಟ ಪಂಗಡದವರ ವಿವಿಧೋದ್ದೇಶ ಸಹಕಾರ ಸಂಘ ನಿ, ಹೊಸದುರ್ಗ ಉಣ್ಣೆ ಮತ್ತು ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘ ನಿ, ಹೊಸದುರ್ಗ.
ನೊಂದಣಿ ರದ್ದತಿಗಾಗಿ:- ಸಮಾಪನೆಗೊಳಿಸಲಾಗಿರುವ ಹೊಳಲ್ಕೆರೆ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘ ನಿ, ಚಿಕ್ಕಎಮ್ಮಿಗನೂರು, ಜಸ್ಮಾ ಪ.ಜಾ/ಪ/ಪಂ. ಹಿಂದುಳಿದ ವರ್ಗಗಳ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ, ಹೊಳಲ್ಕೆರೆ, ಹೊಳಲ್ಕೆರೆ ತಾಲ್ಲೂಕು ಸಣ್ಣ ಮತ್ತು ಅತಿಸಣ್ಣ ರೈತರ ಏತ ನೀರಾವರಿ ಸಹಕಾರ ಸಂಘ ನಿ, ಈ ಸಂಘಗಳನ್ನು ಪುನಶ್ಚೇತನಗೊಳಿಸಲು ಯಾರೂ ಸಹ ಮುಂದೆ ಬಂದಿರುವುದಿಲ್ಲ. ಪ್ರಯುಕ್ತ ಸದರಿ ಸಹಕಾರ ಸಂಘಗಳ ಬಗ್ಗೆ ಮಾಹಿತಿ ಇದ್ದಲ್ಲಿ 7 ದಿನಗಳೊಳಗೆ ಈ ಕಚೇರಿಗೆ ಖುದ್ದಾಗಿ ಬಂದು ಸಂಪರ್ಕಿಸಲು ಸಮಾಪನಾಧಿಕಾರಿಗಳು ತಿಳಿಸಿದ್ದಾರೆ. ಈ ಅವಧಿಯಲ್ಲಿ ಯಾವುದೇ ಅಹವಾಲು/ಮಾಹಿತಿ ಬರದಿದ್ದಲ್ಲಿ ಸಂಘಗಳ ನೊಂದಣಿಯನ್ನು ರದ್ದುಗೊಳಿಸಲಾಗುವುದೆಂದು ಚಿತ್ರದುರ್ಗ ಉಪವಿಭಾಗದ ಸಹಕಾರ ಸಂಘಗಳ ಇಲಾಖೆ ಸಹಾಯಕ ನಿಬಂಧಕರು ತಿಳಿಸಿದ್ದಾರೆ.