ಚಿತ್ರದುರ್ಗ: ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡಿ ಎಂದು ಉತ್ತರಪ್ರದೇಶ ಸಂತಕಬೀರ ಕ್ಷೇತ್ರದ ಸಂಸದ ಶರತ್‌ತ್ರಿಪಾಠಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಪ್ರಮುಖರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ದಾವಣಗೆರೆ ರಸ್ತೆಯಲ್ಲಿರುವ ಜಗಳೂರು ಮಹಲಿಂಗಪ್ಪ ಟವರ್‌ನಲ್ಲಿ ಶನಿವಾರ ನಡೆದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ಹಗರಣಗಳಲ್ಲಿ ಮುಳುಗಿ ಲಕ್ಷಾಂತರ ಕೋಟಿ ರೂ.ಗಳನ್ನು ಲೂಟಿ ಹೊಡೆದಿದೆ. ಆದರೆ ದೇಶದ ಈಗಿನ ಪ್ರಧಾನಿ ಮೋದಿರವರು ಯಾವುದೇ ಕಪ್ಪುಚುಕ್ಕೆಯಿಲ್ಲದೆ ಸ್ವಚ್ಚ ಆಡಳಿತವನ್ನು ಜನತೆಗೆ ನೀಡುತ್ತಿದ್ದಾರೆ. ಹಾಗಾಗಿ ಚಿತ್ರದುರ್ಗದಲ್ಲಿ ಬಿಜೆಪಿಯನ್ನು ಸದೃಢಗೊಳಿಸಿ ಎಂದು ಪ್ರಮುಖರಲ್ಲಿ ಮನವಿ ಮಾಡಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಷಾ ಹಾಗೂ ದೇಶದ ಪ್ರಧಾನಿ ನರೇಂದ್ರಮೋದಿಗೆ ಚಿತ್ರದುರ್ಗ ಜಿಲ್ಲೆಯ ಬಗ್ಗೆ ವಿಶೇಷವಾದ ಕಾಳಜಿಯಿದೆ. ಅದಕ್ಕಾಗಿ ಚಳ್ಳಕೆರೆ ಸಮೀಪ ಇಸ್ರೋ, ಡಿ.ಆರ್.ಡಿ.ಓ., ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ಗೆ ಅತಿ ಹೆಚ್ಚು ಬಂಡವಾಳ ಹೂಡಿ ಜಿಲ್ಲೆಯ ಬಗ್ಗೆ ನಮಗೆ ಪ್ರೀತಿ ಇದೆ ಎಂಬುದನ್ನು ತೋರಿಸಿದ್ದಾರೆ. ದುಬೈಗೆ ಪ್ರಧಾನಿ ಮೋದಿ ಭೇಟಿ ನೀಡಿದಾಗ ಅಲ್ಲಿನ ಮುಸ್ಲಿಂರು ನಮ್ಮಲ್ಲಿ ಹಿಂದು ದೇವಾಲಯ ಕಟ್ಟಿಕೊಳ್ಳಲು ಜಾಗ ನೀಡುತ್ತೇವೆ ಎಂದು ದಾಖಲೆಗಳನ್ನು ನೀಡಿದರು. ಇದನ್ನು ನೋಡಿದರೆ ವಿಶ್ವದಲ್ಲಿಯೇ ಭಾರತವನ್ನು ಮೊದಲನೆ ಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

.ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷದ ಗೆಲುವಿಗೆ ಚಾಚೂ ತಪ್ಪದೆ ಜವಾಬ್ದಾರಿ ವಹಿಸಿಕೊಂಡು ಶ್ರಮಿಸಬೇಕು. ಪ್ರಮುಖರು ನೀವು ಹೇಳುವ ಸಮಯಕ್ಕೆ ನಾವು ಬರಲು ಸಿದ್ದರಿದ್ದೇವೆ. ಪ್ರತಿದಿನ ಸಂಜೆ ವೇಳೆಯಲ್ಲಿ ಸರಣಿ ಸಭೆಗಳನ್ನು ನಡೆಸಿ ಪಕ್ಷವನ್ನು ಬಲಿಪಡಿಸೋಣ ಎಂದು ಹೇಳಿದರು.
ವಿಭಾಗೀಯ ಸಹಪ್ರಭಾರಿ ಜಿ.ಎಂ.ಸುರೇಶ್, ವೆಂಕಟಸ್ವಾಮಿ, ಜಿಲ್ಲಾ ಉಸ್ತುವಾರಿ ಪೂರ್ಣಿಮ, ಟಿ.ಜಿ.ನರೇಂದ್ರನಾಥ್, ಸಿದ್ದೇಶ್‌ಯಾದವ್, ಡಿ.ಟಿ.ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರಳಿ, ರತ್ನಮ್ಮ, ಗ್ರಾಮಾಂತರ ಅಧ್ಯಕ್ಷ ಸುರೇಶ್‌ಸಿದ್ದಾಪುರ, ದಗ್ಗೆಶಿವಪ್ರಕಾಶ್, ನಾಗರಾಜ್‌ಬೇಂದ್ರೆ, ಜಿತೇಂದ್ರ, ರೇವಣಸಿದ್ದಪ್ಪ, ಶಿವಣ್ಣಾಚಾರ್, ವೆಂಕಟೇಶ್‌ಯಾದವ್, ಗುರುಮೂರ್ತಿ, ರಂಗಸ್ವಾಮಿ, ಕಲ್ಲೇಶಯ್ಯ, ಶಂಭು, ಸಾಗರ್, ಲೋಕನಾಥ್, ಚಂದ್ರಿಕಾ ಶಕ್ತಿ ಕೇಂದ್ರ ಹಾಗೂ ಬೂತ್ ಸಮಿತಿ ಅಧ್ಯಕ್ಷರುಗಳು ಇನ್ನು ಮುಂತಾದವರು ಸಭೆಯಲ್ಲಿ ಹಾಜರಿದ್ದರು.