ಚಿತ್ರದುರ್ಗ: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ನಿರ್ವಹಿಸಿ ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಯ ವೈಖರಿಯನ್ನು ಮಚ್ಚಿ ಸುಮಾರು ೧೦೦ಕ್ಕೂ ಹೆಚ್ಚು ಯುವ ಜನತೆ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.

ಚಿತ್ರದುರ್ಗ ನಗರದ ಶಾಸಕರ ನಿವಾಸದ ಆವರಣದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಬುರುಜನಹಟ್ಟಿಯ ರಾಜು ಎಸ್.ಎಂ.ಎಲ್ ರವರ ನೃತೃತ್ವದ ಯುವಕರ ಗುಂಪು ಇದುವರೆವಿಗೂ ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷಗಳಲ್ಲಿದ್ದು ಅಲ್ಲಿ ಸರಿಯಾಗದೆ ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ಪಕ್ಷಕೆ ಬಂದವರನ್ನು ಪಕ್ಷದ ಚಿಹ್ನೆ ಮತ್ತು ನಾಯಕ ಭಾವಚಿತ್ರ ಇರುವ ಶಾಲನ್ನು ಹಾಕುವುದರ ಮೂಲಕ ಶಾಸಕರು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ತಿಪ್ಪಾರೆಡ್ಡಿ, ಕಳೆದ ೪ ವರ್ಷಗಳಲ್ಲಿ ಪ್ರಧಾನ ಮಂತ್ರಿ ಮೋದಿಯವರು ದೇಶವನ್ನು ಪ್ರಗತಿಯತ್ತ ಕೂಂಡ್ಯೂಯುವ ಸಲುವಾಗಿ ದಿನದ ೧೮ ಗಂಟೆಗಳ ಕಾಲ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ ಒಂದು ಕಾಲದಲ್ಲಿ ಭಾರತ ದೇಶವನ್ನು ತಿರಸ್ಕಾರ ಮನೋಭಾವದಿಂದ ನೋಡುತ್ತಿದ್ದ ಬೇರೆ ದೇಶಗಳು ಇಂದು ಸಹಾಯ ಹಸ್ತ ಮತ್ತು ಸ್ನೆಹವನ್ನು ಬೆಳೆಸಲು ಮುಂದಾಗಿದೆ, ಇದು ಮೋದಿಯವರು ದೇಶದ ಪ್ರಧಾನ ಮಂತ್ರಿಯಾದ ಫಲವಾಗಿದೆ. ಇದೇ ರೀತಿ ರಾಜ್ಯದಲ್ಲಿಯೂ ಸಹಾ ಬ್ರಷ್ಠಾ ಕಾಂಗ್ರೇಸ್ ಸರ್ಕಾರವನ್ನು ಕೆಳಗಿಳಿಸಿ ಬಿಜೆಪಿಗೆ ಅಧಿಕಾರವನ್ನು ನೀಡಬೇಕಿದೆ ಇದಕ್ಕೆ ಮತದಾರರು ಮುಂದಾಗಬೇಕಿದೆ ಎಂದರು.

ಬಿಜೆಪಿಯ ಪ್ರಬಾರಿಗಳಾದ ಜಿ.ಎಂ.ಸುರೇಶ್, ಗ್ರಾಮಾಂತರ ಘಟಕದ ಅಧ್ಯಕ್ಷ ಸಿದ್ದಾಪುರದ ಸುರೇಶ್, ನಗರಸಭಾ ಸದಸ್ಯ ಭೀಮರಾಜು ಸೇರಿದಂತೆ ಇತರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜಯಣ್ಣ, ದೇವರಾಜ್, ನಾಗರಾಜ್,ಭರತ್,ರಾಜೇಶ್,ಎಲ್ಲಪ್ಪ,ಘನಶಾಮ್ಯ,ರವಿ,ಪ್ರವೀಣ್ ರಾಹುಲ್ ಸೇರಿದಂತೆ ಇತರರು ಬಿಜೆಪಿ ಸೇರ್ಪಡೆಯಾದರು.