ಚಿತ್ರದುರ್ಗ : ಕಲೆ ಚಿಕ್ಕದಾಗಿ ಆರಂಭವಾಗಿ ಮುಂದೆ ಅದು ಬರೆದವರನ್ನು ದೊಡ್ಡವರನ್ನಾಗಿ ಮಾಡುತ್ತದೆ. ಕಲೋಪಾಸನೆಗೆ ಕಲೆಯ ಸ್ಪರ್ಶ ಕೊಡಬೇಕು. ಆಗ ಅದು ಮೂರ್ತಸ್ವರೂಪ ಪಡೆದುಕೊಳ್ಳುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಹಾಗೂ ಎಸ್.ಜೆ.ಎಂ. ಚಿತ್ರಕಲಾ ಮಹಾವಿದ್ಯಾಲಯ ಚಿತ್ರದುರ್ಗ ಇವರ ಸಹಯೋಗದಲ್ಲಿ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ನಡೆದ ರಾಜ್ಯಮಟ್ಟದ ಚಿತ್ರಕಲಾ ಶಿಬಿರದ ಉದ್ಘಾಟನಾ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಕಲೆಯಲ್ಲಿ ಅನೇಕ ವಿಧವಾದ ಪ್ರಕಾರಗಳಿವೆ. ದೇಶ, ರಾಜ್ಯದ ತುಂಬ ಪ್ರವಾಸ ಮಾಡಿದರೆ ಕಲೆಗೆ ಹೆಚ್ಚಿನ ಮನ್ನಣೆ ಇದೆ ಎನ್ನುವುದು ಗೊತ್ತಾಗುತ್ತದೆ. ಕಲೆಯ ಬೆಲೆ ಪ್ರಾಚೀನವಾದಂತೆ ಹೆಚ್ಚಾಗುತ್ತದೆ. ಹಳೆಯದಾದಷ್ಟು ಕಲಾಕೃತಿಗೆ ಬೆಲೆ ಹೆಚ್ಚು. ಲಂಡನ್‌ನಲ್ಲಿ ಕಲಾಕೃತಿಗಳು ಕೋಟಿಗಟ್ಟಲೆ ಬೆಲೆಗೆ ಹರಾಜು ಆಗುತ್ತವೆ. ಫ್ರಾನ್ಸ್‌ನಲ್ಲಿ ಲೋರೆ ಮ್ಯೂಸಿಯಂ ಇದೆ. ಅದು ಸಾವಿರಾರು ಎಕರೆಯ ನಿರ್ಮಾಣವಾಗಿದೆ. ಇದರ ನಿರ್ಮಾಣಕ್ಕೆ ವಿನಾಶ ಇಲ್ಲ. ಲೋರೆ ಮ್ಯೂಸಿಯಂನ ಆಕರ್ಷಣೆ ಎಂದರೆ ಮೊನಾಲಿಸ. ಶೂನ್ಯಪೀಠ ಪರಂಪರೆಯಲ್ಲಿ ಆರು ಜನ ಸ್ವಾಮಿಗಳ ಫೋಟೋಗಳು ಇಲ್ಲ. ನಾವು ಉಳಿದ ೧೪ ಜನ ಜಗದ್ಗುರುಗಳವರ ಭಾವಚಿತ್ರಗಳನ್ನು ಬರೆಸಬೇಕೆಂದಿzವೆ ಎಂದರು.

ಕಲಾವಿದ ಸೋಮಣ್ಣ ಚಿತ್ರಗಾರ ಮಾತನಾಡಿದರು. ಶಿಬಿರವನ್ನು ಚಿತ್ರ ಬಿಡಿಸುವ ಮೂಲಕ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕರ್ನಾಟಕ ಲಲಿಕಲಾ ಅಕಾಡೆಮಿ ಅಧ್ಯಕ್ಷೆ ಪ್ರೊ. ಎಂ.ಜೆ. ಕಮಲಾಕ್ಷಿ ವಹಿಸಿದ್ದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಸುರೇಂದ್ರನಾಥ್, ಎಸ್.ಜೆ.ಎಂ. ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಕಣ್ಮೇಶ್, ವ್ಯವಸ್ಥಾಪಕ ಎ.ಜೆ.ಪರಮಶಿವಯ್ಯ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್‍ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಮುಂತಾದವರಿದ್ದರು.ಕಲಾವಿದ ಉಮೇಶ ಪತ್ತಾರ್ ಪ್ರಾರ್ಥಿಸಿದರು. ಡಾ. ಬಿ.ಟಿ. ಚಾರುಲತ ನಿರೂಪಿಸಿದರು. ಕಣ್ಮೇಶ್ ವಂದಿಸಿದರು.