ಚಿತ್ರದುರ್ಗ: ಕೋಟೆ ಆವರಣದಲ್ಲಿರುವ ಕರುವರ್ತಿಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಕಾರ್ತಿಕ ಮಾಸದ ವಿಶೇಷ ಪೂಜೆ ನೆರವೇರಿಸಲಾಯಿತು.

ಕೋಟೆ ವಾಯುವಿಹಾರಿಗಳ ಸಂಘದ ಮಹಿಳಾ ನಿರ್ದೇಶಕಿಯರಾದ ಲತ, ರತ್ನಮ್ಮ ಇವರುಗಳ ನೇತೃತ್ವದಲ್ಲಿ ನಡೆದ ಕಾರ್ತಿಕ ಮಾಸದ ಪೂಜೆಯಲ್ಲಿ ದೇವಸ್ಥಾನದ ಸುತ್ತಲೂ ನೂರಾರು ದೀಪಗಳನ್ನು ಬೆಳಗಿ ಲೋಕಕಲ್ಯಾಣಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸಲಾಯಿತು.

ವೀಣ, ಕಮಲ, ವನಜಾಕ್ಷಿ, ಲತ, ಮಂಜುಳ, ಮಹಾದೇವಮ್ಮ, ಶೋಭ, ಜಯಶ್ರಿ, ಶೋಭಕ್ಕ, ಗೀತಮ್ಮ, ಉಮ, ಅಂಬುಜ ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.