ಚಿತ್ರದುರ್ಗ; ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾಡಸೇನೆ ಟಿ.ಎ.ನಾರಾಯಣ ಗೌಡ ಅವರ ಹುಟ್ಟು ಹಬ್ಬದ ಅಂಗವಾಗಿ ಚಿತ್ರದುರ್ಗದಲ್ಲಿ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಎನ್.ಚಂದ್ರಕಲಾ ಅವರು ತಮ್ಮ ನೇತ್ರದಾನ ಮಾಡಿದ್ದಾರೆ.
ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಶನಿವಾರದಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಟಿ.ರಮೇಶ್ ಹಾಗೂ ಉಪಾಧ್ಯಕ್ಷ ಲಕ್ಷ್ಮಣ್ ಆರ್.ಜಿ. ಅವರ ನೇತೃತ್ವದಲ್ಲಿ ಚಂದ್ರಕಲಾ ಅವರು ತಮ್ಮ ನೇತ್ರದಾನದ ನೊಂದಣಿ ಪತ್ರವನ್ನು ಆಸ್ಪತ್ರೆಯ ವೈದ್ಯರಿಗೆ ನೀಡಿದರು
ಇದೇ ಸಂದರ್ಭದಲ್ಲಿ ರಕ್ಷಣಾ ವೇದಿಕೆಯ ಕಾರ್ಯಕರ್ತೆ ವಿಜಯಲಕ್ಷ್ಮೀ ಅವರು ಸಹ ನೇತ್ರದಾನ ಮಾಡಿದರು
ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾ ರಮೇಶ್, ವಸಂತ, ಮಹಿಳಾ ಘಟಕದ ಪದಾಧಿಕಾರಿಗಳಾದ ಗೌರಿ, ಇಂದ್ರಮ್ಮ, ಮೆಹತಾಜ್, ಸಲ್ಮಾ, ಪಾರ್ವತಮ್ಮ, ಇನ್ನಿತರರು ಹಾಜರಿದ್ದರು.