ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಐನಹಳ್ಳಿಯಲ್ಲಿ ಜೂ 01 ರಂದು 38.2 ಮಿ.ಮೀ ಅತಿ ಹೆಚ್ಚು ಮಳೆಯಾಗಿದೆ.  ಜಿಲ್ಲೆಯ ವಿವಿಧೆಡೆ ಆದ ಮಳೆ ವಿವರ ಇಂತಿದೆ.

ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಚಿತ್ರದುರ್ಗ-1 ರಲ್ಲಿ  1 ಮಿ.ಮೀ., ಚಿತ್ರದುರ್ಗ-2 ರಲ್ಲಿ 3.7, ಐನಹಳ್ಳಿ 38.2, ಭರಮಸಾಗರ 12, ಸಿರಿಗೆರೆ 2.2, ತುರುವನೂರು 16.4. ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ ಚಳ್ಳಕೆರೆ 5.2, ಪರುಶುರಾಂಪುರ 9.4, ನಾಯಕನಹಟ್ಟಿ 20.4, ದೇವರ ಮರಿಕುಂಟೆ 9.2, ತಳುಕು 29.4. ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಹಿರಿಯೂರು 7, ಬಬ್ಬೂರು 17, ಈಶ್ವರಗೆರೆ 17.2, ಇಕ್ಕನೂರು 3.4, ಸುಗೂರು 3.2.  ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯ ಹೊಳಲ್ಕೆರೆ 8.4, ರಾಮಗಿರಿ 7, ಚಿಕ್ಕಜಾಜೂರು 3.6, ಬಿ.ದುರ್ಗ 5.  ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹೊಸದುರ್ಗ 8.4, ಬಾಗೂರು 7, ಮತ್ತೋಡು 1.2, ಮಾಡದಕೆರೆ 7.2. ಮೊಳಕಾಲ್ಮೂರು ತಾಲ್ಲೂಕು ವ್ಯಾಪ್ತಿಯ ಮೊಳಕಾಲ್ಮೂರು 22.6, ಬಿ.ಜಿ.ಕೆರೆ 10, ರಾಂಪುರ 5, ದೇವಸಮುದ್ರ 6.2, ರಾಯಪುರ 13.9 ಮಿ.ಮೀ ನಷ್ಟು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.