ಬೆಂಗಳೂರು : ನಟ ಯಶ್ ಐಟು ರೇಡ್ ಆದ ಬಳಿಕ ಇಂದು ಐಟಿ ವಿಚಾರಣೆ ಮುಗಿಸಿಕೊಂಡು ಮಾದ್ಯಮದವರೊಂದಿಗೆ ಮಾತನಾಡಿದ್ದು ಏನಪ್ಪ ಅಂದ್ರೆ ನನಗೆ 17 ಬ್ಯಾಂಕ್ ಗಳಲ್ಲಿ ಲೋನ್ ಆಗಿದೆ. ಲೋನ್ ಆಗಿದೆ ಅಂದ್ರೆ, ನಾನು ಸರಿಯಾಗಿ ತೆರಿಗೆ ಪಾವತಿಸಿದ್ದೇನೆ ಎಂದು ಅರ್ಥ, ಟ್ಯಾಕ್ಸ್ ಕಟ್ಟದೇ ಇದ್ದರೆ ಯಾರು ಲೋನ್ ಕೊಡ್ತಾರೆ ಎಂದು ಯಶ್ ಪ್ರಶ್ನೆ ಮಾಡಿದ್ದಾರೆ

ಯಾರೇ ಏನು ಹೇಳಿಲಿ ಹಾಗೂ ಯಾವುದೇ ಊಹಾಪೋಹಗಳಿಗೆ ನಾನು ತಲೆಕೆಡೆಸಿಕೊಳ್ಳುವುದಿಲ್ಲ. ನನ್ನ ಕೆಲಸ ಮಾಡೋದು ನನಗೆ ಗೊತ್ತಿದೆ. ನಮ್ಮ ಮನೆಯಲ್ಲಿ ಅಷ್ಟು ದುಡ್ಡು ಸಿಕ್ಕಿದೆ ಎನ್ನುವುದು ಸುಳ್ಳು ಎಂದರು.

ಇನ್ನು 2 ವರ್ಷಗಳವರೆಗೂ ತನಿಖೆ ನಡೆಯುವ ಸಾಧ್ಯತೆ ಇದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೆ ವಿಚಾರಣೆಗೆ ಕರೆದ್ರೆ ಹಾಜರಾಗುತ್ತೇನೆ ಎಂದು ಹೇಳಿದರು.