ಚಿತ್ರದುರ್ಗ: ಐತಿಹಾಸಿಕ ಚಿತ್ರದುರ್ಗದ ಬೆಟ್ಟದ ಮೇಲಿರುವ ಏಕನಾಥೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೊದಲ ದಿನವಾದ ಮಂಗಳವಾರ ತರೆಹವಾರಿ ತರಕಾರಿಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಸೋರೆಕಾಯಿ, ಮೂಲಂಗಿ, ಆಗಲಕಾಯಿ, ಜವಳಿಕಾಯಿ, ಕ್ಯಾರೆಟ್, ಆಲುಗಡ್ಡೆ, ಬದನೆಕಾಯಿ, ಬೆಂಡೆಕಾಯಿ, ಬೀನ್ಸ್, ಈರುಳ್ಳಿ, ಮೆಣಸಿನಕಾಯಿಗಳಿಂದ ಏಕನಾಥೇಶ್ವರಿ ಅಮ್ಮನನ್ನು ಕಂಗೊಳಿಸುವಂತೆ ಸಿಂಗರಿಸಲಾಗಿತ್ತು. ಬೆಳಗಿನಿಂದಲೇ ನೂರಾರು ಭಕ್ತರು ಬೆಟ್ಟವನ್ನೇರಿ ಏಕನಾಥೇಶ್ವರಿಯ ದರ್ಶನ ಪಡೆದರು.
ಏಕನಾಥೇಶ್ವರಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜಮೀನ್ದಾರ್ ದೊರೆಸ್ವಾಮಿ, ನಿರ್ದೇಶಕರುಗಳಾದ ರಾಮಜ್ಜ, ಮಲ್ಲಿಕಾರ್ಜುನ್ ಎಸ್.ಬಿ.ಎಲ್. ಕೃಷ್ಣಮೂರ್ತಿ ಇವರುಗಳು ವಿಶೇಷ ಪೂಜೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಚಿತ್ರದುರ್ಗ: ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮನಿಗೆ ಶ್ರಾವಣ ಮಾಸದ ಮೊದಲ ಮಂಗಳವಾರದಂದು ಬಗೆ ಬಗೆಯ ಹೂವು ಹಾರ ಹಾಗೂ ನಿಂಬೆಹಣ್ಣಿನ ಹಾರದಿಂದ ಅಲಂಕರಿಸಲಾಗಿತ್ತು.
ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಕಣಿವೆಮಾರಮ್ಮನನ್ನು ಕಣ್ತುಂಬಿಕೊಂಡರು. ಕೊರೋನಾ ವೈರಸ್ ಹಾವಳಿಯ ನಡುವೆಯೂ ಭಕ್ತರು ಮಾಸ್ಕ್‌ಗಳನ್ನು ಧರಿಸಿ ಅಮ್ಮನ ದರ್ಶನ ಪಡೆದರು.