ಚಿತ್ರದುರ್ಗ: ಐತಿಹಾಸಿಕ ಚಿತ್ರದುರ್ಗದ ಬೆಟ್ಟದ ಮೇಲಿರುವ ಏಕನಾಥೇಶ್ವರಿ ಅಮ್ಮನವರ ಶ್ರಾವಣ ಮಾಸದ ವಿಶೇಷ ಪೂಜೆಯನ್ನು ಬೆಳಿಗ್ಗೆ ಆರು ಗಂಟೆಗೆ ಹಾಗೂ ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ವಿಶೇಷ ಪೂಜೆ ನಡೆಸಲಾಗುವುದು.
ಏಕನಾಥೇಶ್ವರಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಜಮೀನ್‌ದಾರ್ ದೊರೆಸ್ವಾಮಿರವರ ಸಮ್ಮುಖದಲ್ಲಿ ಸಭೆ ಸೇರಿ ಶ್ರಾವಣ ಮಾಸದ ವಿಶೇಷ ಪೂಜೆ ನಡೆಸಲು ತೀರ್ಮಾನಿಸಲಾಯಿತು.

ಕೊರೋನಾ ವೈರಸ್ ಹಾವಳಿಯಿರುವುದರಿಂದ ಶ್ರಾವಣ ಮಾಸದ ವಿಶೇಷ ಪೂಜೆಗೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್‌ಗಳನ್ನು ಧರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಹತ್ತು ವರ್ಷದೊಳಗಿನ ಮಕ್ಕಳನ್ನು ದೇವಸ್ಥಾನಕ್ಕೆ ಕರೆತರಬಾರದು. ಶ್ರಾವಣ ಮಾಸದ ವಿಶೇಷ ಪೂಜೆ ಮಾಡಿಸುವ ಭಕ್ತಾಧಿಗಳು ಎರಡು ದಿನದ ಮುಂಚೆಯೇ ಏಕನಾಥೇಶ್ವರಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಜಮೀನ್ದಾರ್ ದೊರೆಸ್ವಾಮಿ, ನಿರ್ದೇಶಕರುಗಳಾದ ಮಲ್ಲಿಕಾರ್ಜುನ್ ಎಸ್.ಬಿ.ಎಲ್. ರಾಮಜ್ಜ ಇವರುಗಳ ಮೊಬೈಲ್ ಸಂಖ್ಯೆ ೯೭೪೧೨೫೯೧೬೪, ೯೪೪೮೪೨೩೩೬೨, ೯೯೪೫೧೩೧೩೪೧ ಯನ್ನು ಸಂಪರ್ಕಿಸಬಹುದಾಗಿದೆ.